Select Your Language

Notifications

webdunia
webdunia
webdunia
webdunia

ಅಂತರಾಜ್ಯ ಎಟಿಎಂ ಕಳ್ಳನ ಬಂಧನ

ಅಂತರಾಜ್ಯ ಎಟಿಎಂ ಕಳ್ಳನ ಬಂಧನ
ಆನೇಕಲ್ , ಮಂಗಳವಾರ, 26 ಜೂನ್ 2018 (22:27 IST)
ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ನಡೆದ ಎಟಿಎಂ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಂತರಾಜ್ಯ ಎಟಿಎಂ ಕಳ್ಳನನ್ನು ಹೆಡೆಮುರಿ ಕಟ್ಟಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
 
ಬೆಂಗಳೂರು ಹಾಗೂ ಆನೇಕಲ್ ತಾಲೂಕಿನಾದ್ಯಂತ ದರೋಡೆ, ಮನೆ ಕಳ್ಳತನ ಮತ್ತು ಎಟಿಎಂ ಕಳವು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದವು. ಮೂರು ತಿಂಗಳ ಹಿಂದೆ ಸರ್ಜಾಪುರ ಪಟ್ಟಣದ ವಿಜಯ ಬ್ಯಾಂಕ್ ಎಟಿಎಂನಲ್ಲಿ ಇಬ್ಬರು ಅಂತರಾಜ್ಯ ಕಳ್ಳರು ಕಳ್ಳತನ ಮಾಡಲು ಮುಂದಾಗಿ ರಾತ್ರಿ ಪೂರ್ಣ ಪ್ರಯತ್ನ ಮಾಡಿ ವಿಫಲರಾಗಿ ಹಿಂದುರಿಗಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಜಾಪುರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಅಂತರಾಜ್ಯ ಕಳ್ಳರಲ್ಲಿ ಒಬ್ಬನಾದ ಮೊಹಮ್ಮದ್ ಫೀರ್ ಎಂಬಾತನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಮೊಹಮ್ಮದ್ ಫೈಜಿ ತಲೆ ಮರೆಸಿಕೊಂಡಿದ್ದಾನೆ. ಆರೋಪಿ ಮೊಹಮ್ಮದ್ ಫೈಜಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮಾದಕವಸ್ತುಗಳ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದ ಪೊಲೀಸ್ ರು