ಮುಂಬೈ : ಬಾಲಿವುಡ್ ನಿರ್ಮಾಪಕಿ ಪ್ರೇರಣಾ ಅರೋರಾ ಅವರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅವರ ಮನೆಯ ಕೆಲಸದಾಕೆ ಮೇಘವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ ಎಂಬುದಾಗಿ ತಿಳಿದುಬಂದಿದೆ.
ಕೈರುನಾ ಮುಖ್ತರ್ ಅಹ್ಮದ್ (60) ಎಂಬಾಕೆ ಈ ದೂರನ್ನು ದಾಖಲಿಸಿದ್ದು, ‘ನಾನು ಕಳೆದ 10 ವರ್ಷಗಳಿಂದ ಪ್ರೇರಣಾ ಅವರ ಮನೆಯಲ್ಲಿ ಮಧ್ಯರಾತ್ರಿಯಿಂದ ಬೆಳಗಿನವರೆಗೆ ಮಸಾಜ್ ಮಾಡುವ ಕೆಲಸಮಾಡುತ್ತಿದ್ದು, ಸುಮಾರು ತಿಂಗಳಿನಿಂದ ಸಂಬಳ ಕೊಡದ ಕಾರಣ ಸಂಬಳ ಕೇಳಿದ ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ‘ಎಂದು ಕೈರುನಾ ಆರೋಪಿಸಿದ್ದಾಳೆ. ಜೊತೆಗೆ ಹಿಂದೆ ಸಂಬಳ ರೂಪದಲ್ಲಿ ಕೊಟ್ಟಿರುವ1.25 ಲಕ್ಷ ರೂ ಚೆಕ್ ಬೌನ್ಸ್ ಆಗಿದೆ ಎಂದು ತಿಳಿಸಿದ್ದಾಳೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ನಿರ್ಮಾಪಕಿ ಪ್ರೇರಣಾ ಅರೋರಾ ಅವರು,’ ನನ್ನ ಇಮೇಜ್ ಹಾಳು ಮಾಡುವ ಕುತಂತ್ರ ಇದು. ಹಾಗು ಕೈರುನಾ ಅವರು ನಮ್ಮ ಮನೆಯಲ್ಲಿ 56 ಸಾವಿರ ರೂ ಗಳನ್ನು ಕಳ್ಳತನ ಮಾಡಿ ಸಿಕ್ಕಿ ಬಿದ್ದಿದ್ದರು ಈ ಹಿನ್ನೆಲೆಯಲ್ಲಿ ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಈ ರೀತಿಯ ಆರೋಪವನ್ನು ಕೈರುನಾ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ