Select Your Language

Notifications

webdunia
webdunia
webdunia
webdunia

ಬಿಡುಗಡೆಗೆ ಮೊದಲೇ ಸಂಕಷ್ಟಕ್ಕೆ ಸಿಲುಕಿದೆ ಚಿಕ್ಕಣ್ಣನ ಈ ಚಿತ್ರ

ಬಿಡುಗಡೆಗೆ ಮೊದಲೇ ಸಂಕಷ್ಟಕ್ಕೆ ಸಿಲುಕಿದೆ ಚಿಕ್ಕಣ್ಣನ ಈ ಚಿತ್ರ
ಬೆಂಗಳೂರು , ಗುರುವಾರ, 21 ಜೂನ್ 2018 (14:39 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ಹಾಸ್ಯ ನಟ ಚಿಕ್ಕಣ್ಣ ಅವರ ಅಭಿನಯದ  ‘ಡಬ್ಬಲ್ ಇಂಜಿನ್’ ಚಿತ್ರ ಬಿಡುಗಡೆಗೂ ಮೊದಲೇ ಸಂಕಷ್ಟಕ್ಕೆ ಸಿಲುಕಿದೆ.


ಹೌದು. ಬಾಂಬೆ ಮಿಠಾಯಿ' ಖ್ಯಾತಿಯ ಚಂದ್ರಮೋಹನ್ ಅವರು ನಿರ್ದೇಶಿಸಿರುವ ‘ಡಬ್ಬಲ್ ಇಂಜಿನ್’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಈ ಚಿತ್ರ ಬಿಡುಗಡೆಯಾಗುವ  ಮೊದಲೇ ಯೂಟ್ಯೂಬ್‍ನಲ್ಲಿ ಲಭ್ಯವಿರುವ ಸುದ್ದಿ ತಿಳಿದು ಇದೀಗ ಚಿತ್ರತಂಡದವರು ಸೈಬರ್ ಪೊಲೀಸ್‍ಗೆ ದೂರು ನೀಡಿದ್ದಾರೆ.


ನಿಜವಾಗಿಯೂ ಹೇಳಬೇಕೆಂದರೆ ಈ ಚಿತ್ರ ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಆಗಿಲ್ಲ. ಬದಲಾಗಿ ಯಾರೋ ಕಿಡಿಗೇಡಿಗಳು ಬಾಂಬೆ ಮಿಠಾಯಿ' ಚಿತ್ರಕ್ಕೆ `ಡಬ್ಬಲ್ ಇಂಜಿನ್'ನ ಪೋಸ್ಟರ್ ಹಾಕಿ ಯೂಟ್ಯೂಬ್‍ಗೆ ಅಪ್‍ಲೋಡ್ ಮಾಡಿದ್ದಾರೆ. ಇದನ್ನು ನೋಡಿದವರು ‘ಡಬ್ಬಲ್ ಇಂಜನ್' ಚಿತ್ರವು ಅಪ್‍ಲೋಡ್ ಆಗಿದೆ ಅಂತ ಚಿತ್ರವನ್ನು ನೋಡೋಕೆ ಶುರುಮಾಡಿದ್ದಾರೆ. ಅದೇ ಕಾರಣಕ್ಕೆ ಚಿತ್ರತಂಡದವರು ಸೈಬರ್ ಪೊಲೀಸರಿಗೆ ದೂರು ನೀಡಿ, ಅದನ್ನು ತೆಗೆದುಹಾಕುವುದಕ್ಕೆ ಮನವಿ ಸಲ್ಲಿಸಿದ್ದಾರೆ. ಅದಕ್ಕೆ ಪೊಲೀಸರು ಸಹ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೆಸರು ಬದಲಾಯಿಸಿ ಟಾಲಿವುಡ್ ಗೆ ಎಂಟ್ರಿ ಕೊಟ್ಟ ನಟ ಯೋಗೀಶ್