Select Your Language

Notifications

webdunia
webdunia
webdunia
webdunia

ಹೆಸರು ಬದಲಾಯಿಸಿ ಟಾಲಿವುಡ್ ಗೆ ಎಂಟ್ರಿ ಕೊಟ್ಟ ನಟ ಯೋಗೀಶ್

ಹೆಸರು ಬದಲಾಯಿಸಿ ಟಾಲಿವುಡ್ ಗೆ ಎಂಟ್ರಿ ಕೊಟ್ಟ ನಟ ಯೋಗೀಶ್
ಬೆಂಗಳೂರು , ಗುರುವಾರ, 21 ಜೂನ್ 2018 (14:35 IST)
ಬೆಂಗಳೂರು : ಕನ್ನಡ ಚಿತ್ರರಂಗದಿಂದ ಅನೇಕ ಸಿನಿಮಾ ತಾರೆಯರು ಪರಭಾಷೆಯ ಸಿನಿಮಾಗಳಲ್ಲಿ ನಟಿಸಲು ಹೋಗಿದ್ದಾರೆ. ಅದೇರೀತಿ ಇದೀಗ ಲೂಸ್ ಮಾದ ಖ್ಯಾತಿಯ ನಟ ಯೋಗಿಶ್ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡು ಟಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.


ಹೌದು. ಕನ್ನಡದ ವಿಜಯ್ ಅಭಿನಯದ ‘ದುನಿಯಾ’ ಸಿನಿಮಾದಲ್ಲಿ ‘ಲೂಸ್ ಮಾದ’ ಎಂಬ ಪಾತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟ ಯೋಗಿಶ್ ಅವರು ತೆಲುಗಿನಲ್ಲಿ ತಯಾರಾಗುತ್ತಿರುವ 'ಮೊನಗಾಡು' ಎಂಬ ಚಿತ್ರದ ಮೂಲಕ ಹೀರೋ ಆಗಿ ತೆಲುಗು ಇಂಡಸ್ಟ್ರಿಗೆ ಹೋಗಿದ್ದಾರೆ. ಇದೇ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಯೋಗಿ ಅವರು ಇದೀಗ ತೆಲುಗು ಚಿತ್ರಕ್ಕಾಗಿ ತಮ್ಮ ಹೆಸರನ್ನು 'ಪಾಲ್ಗುಣ' ಅಂತ ಬದಲಾಯಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಎಂ.ಎಂ ವೆಂಕಟ್ ಆಯಕ್ಷನ್ ಕಟ್ ಹೇಳುತ್ತಿದ್ದು, ರಾಗ ಶ್ರೀ ಕ್ರಿಯೇಷನ್ಸ್ ಹಾಗೂ ಯೋಗಿಶ್ ತಂದೆ ಸಿದ್ದರಾಜು ಸ್ಯಾಮಿ ಅಸೋಸಿಯೆಟ್ಸ್ ಬ್ಯಾನರ್ನಡಿಯಲ್ಲಿ ಜಂಟಿಯಾಗಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಈ ಚಿತ್ರದಲ್ಲಿ ಯೋಗಿಗೆ ನಾಯಕಿಯಾಗಿ ಭಾನುಶ್ರೀ ನಟಿಸಿದ್ದಾರೆ. ಈಗಾಗಲೇ ಚಿತ್ರದ ಮುಹೂರ್ತವೂ ಸಹ ನಡೆದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ತಾಯಿಯಿಂದ ನಟ ಸಿಂಬುಗೆ ಸಿಕ್ಕಿದೆ ವಿಶೇಷ ಉಡುಗೊರೆ. ಏನದು ಗೊತ್ತಾ?