Select Your Language

Notifications

webdunia
webdunia
webdunia
webdunia

ಮುಖದ 5 ಸಮಸ್ಯೆಗಳಿಗೆ ಪರಿಹಾರ ನೀಡುವುದು ಈ ಹಣ್ಣು

ಮುಖದ 5 ಸಮಸ್ಯೆಗಳಿಗೆ ಪರಿಹಾರ ನೀಡುವುದು ಈ ಹಣ್ಣು
ಬೆಂಗಳೂರು , ಗುರುವಾರ, 21 ಜೂನ್ 2018 (13:40 IST)
ಬೆಂಗಳೂರು : ಪಪ್ಪಾಯ ಹಣ್ಣು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೇ ಇದೆ. ಅದೇರೀತಿ ಇದು ಮುಖದ ಅಂದವನ್ನು ಹೆಚ್ಚಿಸಲು ಕೂಡ ಉಪಯೋಗಕಾರಿ. ಹೌದು ಇದು ಮುಖದ 5 ಸಮಸ್ಯೆಗಳನ್ನು  ನಿವಾರಿಸಲು ಸಹಕಾರಿಯಾಗಿದೆ.


*ಮುಖದ ಕಪ್ಪು ಕಲೆ  : ಸ್ವಲ್ಪ ಪಪ್ಪಾಯಿ, 1 ಹನಿ ನಿಂಬೆ ರಸ, ಅರ್ಧ ಚಮಚ ಹನಿ ಜೇನು ಹಾಕಿ ಮಿಕ್ಸ್ ಮಾಡಿ ದಿನಾ ಹಚ್ಚಿ, ಕಪ್ಪು ಕಲೆ ಬೇಗನೆ ಮಾಯವಾಗುವುದು.

*ಒಣ ತ್ವಚೆ ಸಮಸ್ಯೆ : ಪಪ್ಪಾಯಿಯನ್ನು ಜೇನು ಜತೆ ಮಿಕ್ಸ್‌ ಮಾಡಿ ಹಚ್ಚುವುದು ತ್ವಚೆ ನುಣುಪಾಗುವುದು

*ಡಾರ್ಕ್ ಸರ್ಕಲ್ : ಪಪ್ಪಾಯಿಗೆ ಸ್ವಲ್ಪ ಆಲೀವ್‌ ಎಣ್ಣೆ ಹಾಕಿ ಮಿಕ್ಸ್‌ ಮಾಡಿ ಮುಖಕ್ಕೆ ಹಚ್ಚಿದರೆ ಕಪ್ಪು ಕಲೆ ಇಲ್ಲವಾಗುವುದು, ಬೇಗನೆ ನೆರಿಗೆಯೂ ಬೀಳುವುದಿಲ್ಲ.

*ಮೊಡವೆ ಸಮಸ್ಯೆಗೆ : ದಿನಾ 1 ಬೌಲ್‌ ಪಪ್ಪಾಯಿ ತಿನ್ನಿ. ಹಣ್ಣಾದ ಪಪ್ಪಾಯಿಯನ್ನು ಮ್ಯಾಶ್ ಮಾಡಿ ಮುಖಕ್ಕೆ ಹಚ್ಚಿ. ಈ ರೀತಿ ಮಾಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ಮೊಡವೆ ಸಮಸ್ಯೆ ಇಲ್ಲವಾಗುವುದು.

*ತ್ವಚೆ ಕಾಂತಿ ಹೆಚ್ಚಿಸಲು : ವಾರದಲ್ಲಿ 3-4 ಬಾರಿ ಪಪ್ಪಾಯಿ ಮಾಸ್ಕ್‌ ಹಾಕಿದರೆ ಮುಖದ ಕಾಂತಿ ಹೆಚ್ಚುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಯಸ್ಸು ಮಾಗಿದ ಹಾಗೇ ಸೆಕ್ಸ್ ಕೂಡಾ ಖುಷಿ ಕೊಡುವುದು ಯಾಕೆ?