Select Your Language

Notifications

webdunia
webdunia
webdunia
webdunia

ಜಿಮ್ ಮಾಡಿದ ತಕ್ಷಣ ಇವುಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ

ಜಿಮ್ ಮಾಡಿದ ತಕ್ಷಣ ಇವುಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ
ಬೆಂಗಳೂರು , ಗುರುವಾರ, 21 ಜೂನ್ 2018 (13:43 IST)
ಬೆಂಗಳೂರು : ಕೆಲವರು ದೇಹವನ್ನು ಫಿಟ್ ಆಗಿಸಲು ಜಿಮ್ ನಲ್ಲಿ ವರ್ಕ್ಔಟ್ ಮಾಡುತ್ತಾರೆ. ಆದರೆ ಅಂತವರು ಜಿಮ್ ಮಾಡಿದ ತಕ್ಷಣ ಇವುಗಳನ್ನು ಸೇವಿಸಬಾರದು.


ಸಾಮಾನ್ಯವಾಗಿ ದೇಹವು ಹೆಚ್ಚು ದಣಿದಾಗ ನೀರು ಕುಡಿಯುವುದು ಒಂದು ಅಭ್ಯಾಸ, ಆದರೆ ಈ ಅಭ್ಯಾಸ ಆರೋಗ್ಯದ ದೃಷ್ಟಿಯಿಂದ ಸೂಕ್ತವಾದದ್ದಲ್ಲ. ಅಭ್ಯಾಸದ ಸಮಯದಲ್ಲಿ ದೇಹದಿಂದ ಹೊರ ಹೊಮ್ಮಿದ ನೀರಿನಂಶವು ಪುನಃ ತಾನಾಗಿಯೇ ದೇಹದಲ್ಲಿ ಶೇಖರಣೆಗೊಳಗಾಗಬೇಕು. ತಕ್ಷಣಕ್ಕೆ ನೀರನ್ನು ಕುಡಿಯ ಬಾರದು.


ದೇಹವು ಜಿಮ್ ಮತ್ತು ವ್ಯಾಯಾಮದಿಂದ ದಣಿದಿರುವಾಗ ಕೊಬ್ಬಿನ ಆಹಾರ ಪದಾರ್ತಗಳನ್ನು ಸೇವಿಸಬಾರದು. ಹಾಗೊಮ್ಮೆ ಸೇವಿಸಿದರೆ ಮಾಡಿದ ಪರಿಶ್ರಮಕ್ಕೆ ಯಾವುದೇ ಫಲ ದೊರೆಯದು. ಆದಷ್ಟು ಗುಣಮಟ್ಟದ ಪ್ರೊಟೀನ್ ಮತ್ತು ಕಾರ್ಬೋಹೈಡ್ರೇಟ್ ಯುಕ್ತ ಆಹಾರವನ್ನು ಸೇವಿಸಬೇಕು. ನಾವು ಸೇವಿಸುವ ಆಹಾರವು ತ್ವರಿತವಾಗಿ ರಕ್ತವನ್ನು ಪ್ರವೇಶಿಸುತ್ತದೆ. ಕೊಬ್ಬಿನ ಆಹಾರ ಸೇವಿಸಿದರೆ ಅವು ಜೀರ್ಣಾಂಗ ಕ್ರಿಯೆಯನ್ನು ನಿಧಾನಗೊಳಿಸುತ್ತವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಖದ 5 ಸಮಸ್ಯೆಗಳಿಗೆ ಪರಿಹಾರ ನೀಡುವುದು ಈ ಹಣ್ಣು