Publish Date: Thu, 21 Jun 2018 (14:03 IST)
Updated Date: Thu, 21 Jun 2018 (14:05 IST)
ಬೆಂಗಳೂರು : ಸ್ಯಾಂಡಲ್ ವುಡ್ ಸ್ಟಾರ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ದೇವಸ್ಥಾನವೊಂದಕ್ಕೆ ವಿಶೇಷವಾದ ಉಡುಗೊರೆಯೊಂದನ್ನು ನೀಡಿ ಇದೀಗ ಸುದ್ದಿಯಲ್ಲಿದ್ದಾರೆ.
ನಟ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ಪಂಚಪ್ರಾಣ. ಪ್ರಾಣಿಪ್ರಿಯರಾಗಿರುವ ದರ್ಶನ ಅವರು ಆಗಾಗ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಅವುಗಳನ್ನು ಪಾಲನೆ ಮಾಡುತ್ತಾರೆ. ಅದಕ್ಕಾಗಿ ಒಂದು ಫಾರ್ಮ್ ಹೌಸ್ ಕೂಡ ನಿರ್ಮಿಸಿದ್ದಾರೆ. ಅವರ ಈ ಗುಣ ನೋಡಿ ಕರ್ನಾಟಕ ಅರಣ್ಯ ಇಲಾಖೆ ಅವರನ್ನು ತಮ್ಮ ಇಲಾಖೆಯ ರಾಯಾಭಾರಿಯನ್ನಾಗಿ ಆಯ್ಕೆ ಮಾಡಿತ್ತು. ಈಗ ದರ್ಶನ್ ಅವರು ನಗರದ ಚಾಮರಾಜಪೇಟೆಯಲ್ಲಿರುವ ಬಂಡಿ ಮಹಾಕಾಳಮ್ಮ ಟೆಂಪಲ್ ಗೆ ನಾಯಿ ಮರಿಗಳನ್ನ ಉಡುಗೋರೆ ಆಗಿ ನೀಡಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ