Select Your Language

Notifications

webdunia
webdunia
webdunia
webdunia

ಯುಎಇ ಬೀಚ್ ಗಳಲ್ಲಿ ಹೊಸ ಕ್ರಮ ಜಾರಿ ; ನಿಯಮ ಉಲ್ಲಂಘಿಸಿದರೆ ದಂಡ

ಯುಎಇ ಬೀಚ್ ಗಳಲ್ಲಿ  ಹೊಸ ಕ್ರಮ ಜಾರಿ ; ನಿಯಮ ಉಲ್ಲಂಘಿಸಿದರೆ ದಂಡ
ಫುಜೈರಾ , ಶನಿವಾರ, 23 ಜೂನ್ 2018 (14:59 IST)
ಫುಜೈರಾ(ಯುಎಇ) : ಸಮುದ್ರ ಕಿನಾರೆಗೆ ಹೋಗುವ ಜನರ ಸುರಕ್ಷತೆಗಾಗಿ ಫುಜೈರಾ ಪೊಲೀಸರು ಹೊಸ ರೀತಿಯ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.


ಅದೇನೆಂದರೆ ನೆರಳಿಗಾಗಿ ಸಾಲಾಗಿ ಕೊಡೆಗಳನ್ನು ಅಳವಡಿಸಲಾಗಿರುವ ಯುಎಇ ಸಮುದ್ರ ಕಿನಾರೆಯಲ್ಲಿ ವಾಹನಗಳು ಮತ್ತು ಮೋಟರ್ ಸೈಕಲ್‌ಗಳನ್ನು ಚಲಾಯಿಸಬಾರದು. ಒಂದು ವೇಳೆ  ಈ ನಿಯಮವನ್ನು ಉಲ್ಲಂಘಿಸುವವರಿಗೆ 1,000 ದಿರ್ಹಮ್ (ಸುಮಾರು 18,500 ರೂಪಾಯಿ) ದಂಡ ವಿಧಿಸಲಾಗುವುದು ಹಾಗೂ 8 ಋಣಾತ್ಮಕ ಅಂಕಗಳನ್ನು ನೀಡಲಾಗುವುದು. ಅಂಥವರ ವಾಹನಗಳನ್ನು 7 ದಿನಗಳ ಅವಧಿಗೆ ಮುಟ್ಟುಗೋಲು ಹಾಕಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಹಾಗೇ ಈ ನಿಯಮವನ್ನು ಜಾರಿಗೊಳಿಸುವುದಕ್ಕಾಗಿ ಪೊಲೀಸ್ ಗಸ್ತು ತಂಡಗಳನ್ನು ಕಳುಹಿಸಲಾಗುವುದು ಎಂಬುದಾಗಿ ಪೊಲೀಸರು ತಮ್ಮ 'ಇನ್‌ಸ್ಟಾಗ್ರಾಂ' ಖಾತೆಯಲ್ಲಿ ಹಾಕಿದ ಸಂದೇಶದ ಮೂಲಕ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾ.ಚಲಮೇಶ್ವರ್ ರಾಜಕೀಯ ಪ್ರವೇಶಿಸುತ್ತಾರಾ?