Select Your Language

Notifications

webdunia
webdunia
webdunia
webdunia

ಗೆಳತಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಬಿಗ್ ಬಾಸ್ -7 ಸ್ಪರ್ಧಿ ಅರ್ಮಾನ್ ಕೊಹ್ಲಿ

ಗೆಳತಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಬಿಗ್ ಬಾಸ್ -7 ಸ್ಪರ್ಧಿ ಅರ್ಮಾನ್ ಕೊಹ್ಲಿ
ಮುಂಬೈ , ಬುಧವಾರ, 6 ಜೂನ್ 2018 (14:11 IST)
ಮುಂಬೈ : ಸದಾ ವಿವಾದದ ಸುಳಿಯಲ್ಲೇ ಸಿಲುಕಿಕೊಂಡಿರುವ ಹಿಂದಿ ಬಿಗ್ ಬಾಸ್ ಸೀಸನ್ 7 ಸ್ಪರ್ಧಿ ಅರ್ಮಾನ್ ಕೊಹ್ಲಿ ಅವರ ಮೇಲೆ ಇದೀಗ ಮುಂಬಯಿ ಪೊಲೀಸರು ಕೇಸು ದಾಖಲಿಸಿದ್ದಾರೆ.

ಅರ್ಮಾನ್ ಕೊಹ್ಲಿ  ಅವರು ತಮ್ಮ ಗೆಳತಿ ಮೀನು ರಾಂಧವಾ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಆಕೆಯ ಕೂದಲನ್ನು ಹಿಡಿದು ಆಕೆಯ ತಲೆಯನ್ನು ಗೋಡೆಗೆ ಹೊಡೆದಿದ್ದಾರೆ. ಈ ಘಟನೆಯಿಂದ ಗಾಯಗೊಂಡ ಆಕೆಯನ್ನು ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಈ ಬಗ್ಗೆ ಆಕೆ ಸಾಂಥಾ ಕ್ರೋಜ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಐಪಿಸಿ ಸೆಕ್ಷನ್ 326 ಅಡಿ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಭಾನುವಾರ ಅರ್ಮಾನ್ ಮನೆಗೆ ಭೇಟಿ ನೀಡಿದ್ದ ಪೊಲೀಸರಿಗೆ  ಅರ್ಮಾನ್ ಸಿಗದ ಕಾರಣ  ಅವರು ಆತನನ್ನು  ಹುಡುಕುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಆತನನ್ನು ಬಂಧಿಸಲಾಗುತ್ತದೆ ಎಂಬ ಮಾಹಿತಿ ಕೂಡ ತಿಳಿದುಬಂದಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಆಲಿಯಾ ಭಟ್ ಗೆ ರಣ್ ಬೀರ್ ಕುಟುಂಬದ ಸದಸ್ಯರೊಬ್ಬರಿಂದ ಸಿಕ್ಕಿದೆಯಂತೆ ದುಬಾರಿ ಗಿಫ್ಟ್‌!