Select Your Language

Notifications

webdunia
webdunia
webdunia
webdunia

ನಟಿ ಆಲಿಯಾ ಭಟ್ ಗೆ ರಣ್ ಬೀರ್ ಕುಟುಂಬದ ಸದಸ್ಯರೊಬ್ಬರಿಂದ ಸಿಕ್ಕಿದೆಯಂತೆ ದುಬಾರಿ ಗಿಫ್ಟ್‌!

ನಟಿ ಆಲಿಯಾ ಭಟ್ ಗೆ ರಣ್ ಬೀರ್ ಕುಟುಂಬದ ಸದಸ್ಯರೊಬ್ಬರಿಂದ ಸಿಕ್ಕಿದೆಯಂತೆ ದುಬಾರಿ ಗಿಫ್ಟ್‌!
ಮುಂಬೈ , ಬುಧವಾರ, 6 ಜೂನ್ 2018 (14:09 IST)
ಮುಂಬೈ : ಬಾಲಿವುಡ್ ನಟಿ ಆಲಿಯಾ ಭಟ್ ಅವರಿಗೆ ನಟ ರಣ್ ಬೀರ್ ಕಪೂರ್ ಅವರ  ಕುಟುಂಬದ ಸದಸ್ಯರೊಬ್ಬರು ಕಾಸ್ಟ್ಲಿ ಗಿಫ್ಟ್‌ ವೊಂದನ್ನು ನೀಡಿದ್ದಾರಂತೆ.


ಇತ್ತೀಚೆಗೆ  ನಟಿ ಆಲಿಯಾ ಭಟ್ ಹಾಗೂ ನಟ ರಣ್ ಬೀರ್ ಕಪೂರ್ ಇಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಎಲ್ಲಾ ಕಡೆ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಅವರಿಬ್ಬರು ಮಾತ್ರ ಅಧಿಕೃತವಾಗಿ ಹೇಳಿಲ್ಲ. ಆದರೆ ಇತ್ತೀಚೆಗೆ ರಣಬೀರ್ ಅವರ  ಸಹೋದರಿ ರಿದ್ಧಿಮಾ ಕಪೂರ್ ಅವರು ನಟಿ ಆಲಿಯಾ ಭಟ್ ಗೆ ಕಾಸ್ಟ್ಲಿ ಗಿಫ್ಟ್‌ ವೊಂದನ್ನು ನೀಡಿದ್ದಾರಂತೆ.


ಅಂದ ಹಾಗೆ ಆ ಕಾಸ್ಟ್ಲಿ ಗಿಫ್ಟ್‌ ಯಾವುದೆಂದರೆ, 14 ಕ್ಯಾರೆಟ್ ಚಿನ್ನದ ಬ್ರೇಸ್‌ ಲೆಟ್. ಇದರ ಬೆಲೆ 27,810 ರೂ ಎನ್ನಲಾಗಿದ್ದು, ಇದನ್ನು ಖುದ್ದು ಆಲಿಯಾ ಭಟ್ ತಮ್ಮ ಇನ್‌ ಸ್ಟಾಗ್ರಾಂ ಪೋಸ್ಟ್‌ ನಲ್ಲಿ ರಿದ್ಧಿಮಾಗೆ ಥ್ಯಾಂಕ್ಸ್ ಹೇಳಿ ಪೋಸ್ಟ್ ಹಾಕಿದ್ದಾರೆ. ಇದನ್ನು ನೋಡಿದರೆ ಆಲಿಯಾ ಹಾಗೂ ರಣ್ ಬೀರ್ ನಡುವೆ ಸಮ್‌ ಥಿಂಗ್ ಇರುವುದಂತು ಖಚಿತ ಎನಿಸುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅರ್ಜುನ್ ಕಪೂರ್ ಮೇಲೆ ಪರಿಣಿತಿ ಚೋಪ್ರಾ ಮಾಡಿದ ಆರೋಪವೇನು ಗೊತ್ತಾ…?