Select Your Language

Notifications

webdunia
webdunia
webdunia
webdunia

ಪ್ರೇಕ್ಷಕರನ್ನು ಮುಜುಗರಕ್ಕೀಡು ಮಾಡಿದೆಯಂತೆ 'ವೀರ್ ದಿ ವೆಡ್ಡಿಂಗ್' ಚಿತ್ರದ ಈ ಸನ್ನಿವೇಶ

ಪ್ರೇಕ್ಷಕರನ್ನು ಮುಜುಗರಕ್ಕೀಡು ಮಾಡಿದೆಯಂತೆ 'ವೀರ್ ದಿ ವೆಡ್ಡಿಂಗ್' ಚಿತ್ರದ ಈ ಸನ್ನಿವೇಶ
ಮುಂಬೈ , ಮಂಗಳವಾರ, 5 ಜೂನ್ 2018 (16:01 IST)
ಮುಂಬೈ : ಇತ್ತೀಚೆಗೆ ಬಿಡುಗಡೆಗೊಂಡಿರುವ 'ವೀರ್ ದಿ ವೆಡ್ಡಿಂಗ್' ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದರೂ ಕೂಡ ಈ ಚಿತ್ರದಲ್ಲಿ ಬರುವ ಒಂದು ಸನ್ನಿವೇಶ ಪ್ರೇಕ್ಷಕರನ್ನು ಮುಜುಗರಕ್ಕೆ ಈಡು ಮಾಡುತ್ತಿದೆ ಎಂಬುದಾಗಿ ತಿಳಿದುಬಂದಿದೆ.


ಬಾಲಿವುಡ್ ನಟಿಯರಾದ ಕರೀನಾ ಕಪೂರ್, ಸೋನಂ ಕಪೂರ್, ಸ್ವರ ಭಾಸ್ಕರ್ ಹಾಗು ಶಿಖಾ ತಾಲ್ಸಾನಿಯಾ ಅವರ ತಾರಾಗಣದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಮಹಿಳಾ ಪ್ರಾಧಾನ್ಯತೆ ಹಾಗು ಅವರ ವೈಯಕ್ತಿಕ ಸಮಸ್ಯೆಗಳನ್ನು ಅತ್ಯುತ್ತಮವಾಗಿ ಬಿಂಬಿಸಿದ್ದಾರೆ ಎನ್ನಲಾಗಿದೆ.


ಆದರೆ ಈ ಸಿನಿಮಾದಲ್ಲಿ ಸ್ವರಾ ಭಾಸ್ಕರ್ ಅವರ ಹಸ್ತ ಮೈಥುನ ಸನ್ನಿವೇಶ ಮಾತ್ರ ಮಹಿಳೆಯರನ್ನು ಮುಜುಗರಕ್ಕೆ ಈಡು ಮಾಡಿದೆ ಎಂಬ ವಿಚಾರ ಈಗ ಎಲ್ಲಾ ಕಡೆ ಬಾರೀ ಚರ್ಚೆಯಾಗುತ್ತಿದೆ. ಈ ಸನ್ನಿವೇಶದ ಕುರಿತಾಗಿ ಮಹಿಳಾ ಪ್ರೇಕ್ಷಕರು ತಮ್ಮ ತಂದೆ ತಾಯಿ ಹಾಗು ಹಿರಿಯ ಜೊತೆ ಹೋಗಿ ಸಿನಿಮಾವನ್ನು ನೋಡಿ ಮುಜುಗರಕ್ಕೆ ಈಡಾಗಿರುವುದರ ಬಗ್ಗೆ ತಮ್ಮ ಅನಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುವುದರ ಮೂಲಕ ಪೋಸ್ಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ಅಂಗಳಕ್ಕೆ ಹಾರಿದ ನಟಿ ವೇದಿಕಾ