Publish Date: Tue, 26 Jun 2018 (19:21 IST)
Updated Date: Tue, 26 Jun 2018 (19:25 IST)
ಪ್ರೀತಿಯ ನಾಯಿ ಸಾವನ್ನಪ್ಪಿದ ಹಿನ್ನಲೆ ಅದರ ಮಾಲೀಕ ಮನೆಯ ಮುಂದೆ ಶಾಮೀಯಾನ ಹಾಕಿ ನಿಧನ ಹೊಂದಿದ ನಾಯಿಗೆ ತಿಥಿ ಮಾಡುವ ಮೂಲಕ ವಿಶಿಷ್ಟ ಕಾರ್ಯಕ್ರಮ ಆಯೋಜನೆ ಮಾಡಿದ್ದಾನೆ.
ದಾವಣಗೆರೆಯ ಗಾಂಧಿನಗರದ ಮಂಜು ಎಂಬುವವರಿಂದ ತಿಥಿ ಕಾರ್ಯಕ್ರಮ ಆಯೋಜನೆ ಆಗಿದೆ. ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ನಾಯಿ ಸಾವನ್ನಪ್ಪಿತ್ತು. ಪ್ರೀತಿಯ 'ಅಡವಿ' ನಾಯಿಗೆ ಹಿಂದು ಸಂಪ್ರದಾಯದಂತೆ ಹಿಂದು ರುದ್ರಭೂಮಿಯಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ನಾಯಿ ಮಾಲೀಕ ಅಂತ್ಯಸಂಸ್ಕಾರ ನಡೆಸಿದ್ದ.
ಈಗ ಈ ನಾಯಿ ಪ್ರೇಮಿ ಮೂರು ದಿನದ ತಿಥಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾನೆ. ನಾಯಿ ಫೋಟೊ ಇಟ್ಟು ಶಾಸ್ತ್ರೋಕ್ತ ವಾಗಿ ಪೂಜೆ ನಡೆಸಲಾಗುತ್ತಿದ್ದು, ನಾಯಿ ಮೇಲಿನ ಪ್ರೀತಿ ಕಂಡು, ನಾಯಿ ತಿಥಿ ಕಾರ್ಯಕ್ರಮಕ್ಕೆ ಇಡೀ ಏರಿಯ ಜನರೆ ಬರ್ತಿದ್ದಾರೆ.