Publish Date: Thu, 30 Aug 2018 (09:04 IST)
Updated Date: Thu, 30 Aug 2018 (09:07 IST)
ಬೆಂಗಳೂರು: ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿರುವ ನಟಿ, ಕಾಂಗ್ರೆಸ್ ಶಾಸಕಿ ಜಯಮಾಲಾ ಗ್ಲಾಮರಸ್ ಸಚಿವೆಯಂತೆ!
ಹೀಗಂತ ಹೇಳಿರುವುದು ಕಾಂಗ್ರೆಸ್ ನವರೇ ಆದ ಸಚಿವ ಪ್ರಮೋದ್ ಮಧ್ವರಾಜ್. ನಗರ ಪಂಚಾಯರ್ ಚುನಾವಣೆಗಳ ಪ್ರಚಾರಕ್ಕೆ ಜಯಮಾಲಾ ಕೇವಲ ಒಂದೇ ದಿನ ಬಂದು ಪ್ರಚಾರ ಮಾಡಿ ಹೋಗಿದ್ದಾರೆ. ಈ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಪ್ರಮೋದ್ ಮಧ್ವರಾಜ್ ಈ ರೀತಿ ಹೇಳಿದ್ದಾರೆ.
‘ಜಯಮಾಲಾ ನಮ್ಮ ಗ್ಲಾಮರಸ್ ಉಸ್ತುವಾರಿ ಸಚಿವರು. ಅವರ ಗ್ಲಾಮರ್ ನಮಗೂ ಇಲ್ಲ. ಅವರ ಒಂದು ದಿನದ ಪ್ರಚಾರವೇ ಸಾಕಷ್ಟು ಪ್ರಭಾವ ಸೃಷ್ಟಿಸಲಿದೆ’ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.