Publish Date: Thu, 30 Aug 2018 (08:46 IST)
Updated Date: Thu, 30 Aug 2018 (08:48 IST)
ನವದೆಹಲಿ: ಕೊನೆಗೂ ಕಾಂಗ್ರೆಸ್ ಅಧ್ಯಕ್ಷ ಕೈಲಾಸ ಯಾತ್ರೆ ಕೈಗೊಳ್ಳುವ ದಿನ ಪ್ರಕಟಿಸಿದ್ದಾರೆ. ಇದಕ್ಕೂ ಮೊದಲು ರಾಹುಲ್ ಕೈಲಾಸ ಯಾತ್ರೆ ಬಗ್ಗೆ ಹಲವು ಊಹಾಪೋಹಗಳು ಎದ್ದಿದ್ದವು.
ಇದೀಗ ಅಧಿಕೃತವಾಗಿದೆ. ನಾಳೆಯಿಂದ ರಾಹುಲ್ ಕೈಲಾಸ, ಮಾನಸ ಸರೋವರ ಯಾತ್ರೆ ಕೈಗೊಳ್ಳಲಿದ್ದಾರೆ. ಇದಕ್ಕೂ ಮೊದಲು ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದ ಬಳಿಕ ರಾಹುಲ್ ಕೈಲಾಸ ಯಾತ್ರೆ ಕೈಗೊಳ್ಳುತ್ತಾರೆಂಬ ಸುದ್ದಿಯಿತ್ತು.
ಚೀನಾ ಮಾರ್ಗವಾಗಿ ರಾಹುಲ್ ಯಾತ್ರೆ ಕೈಗೊಳ್ಳಲಿದ್ದಾರೆ. ಕೈಲಾಸ ಯಾತ್ರೆ ಮುಗಿಸಿದ ಬಳಿಕ ಮಧ್ಯಪ್ರದೇಶ ಚುನಾವಣಾ ರ್ಯಾಲಿಗೆ ರಾಹುಲ್ ಚಾಲನೆ ನೀಡಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.