Select Your Language

Notifications

webdunia
webdunia
webdunia
webdunia

ಕೇರಳ ಪ್ರವಾಸದಲ್ಲಿ ಒಂದು ಒಳ್ಳೆಯ ಕೆಲಸ ಮಾಡಿದ ರಾಹುಲ್ ಗಾಂಧಿ

ಕೇರಳ ಪ್ರವಾಸದಲ್ಲಿ ಒಂದು ಒಳ್ಳೆಯ ಕೆಲಸ ಮಾಡಿದ ರಾಹುಲ್ ಗಾಂಧಿ
ತಿರುವನಂತರಪುರಂ , ಬುಧವಾರ, 29 ಆಗಸ್ಟ್ 2018 (09:53 IST)
ತಿರುವನಂತರಪುರಂ: ಕೇರಳ ಪ್ರವಾಹ ಪೀಡಿತರ ಸಮಸ್ಯೆ ಆಲಿಸಲು ದೇವರ ನಾಡಿಗೆ ಎರಡು ದಿನಗಳ ಭೇಟಿ ಕೊಟ್ಟಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒಂದು ಒಳ್ಳೆಯ ಕೆಲಸ ಮಾಡಿ ಸುದ್ದಿಯಾಗಿದ್ದಾರೆ.

ಕಾರ್ಯಕ್ರಮ ಮುಗಿಸಿ ಆಲಪ್ಪುಳದ ತಮ್ಮ ಹೆಲಿಕಾಪ್ಟರ್ ಏರಲು ಹೊರಟಿದ್ದ ರಾಹುಲ್ ಗಾಂಧಿಗೆ ಅದೇ ಹೆಲಿಪ್ಯಾಡ್ ನಲ್ಲಿ ಹಾರಾಟಕ್ಕೆ ಸಿದ್ಧವಾಗಿರುವ ಏರ್ ಆಂಬ್ಯುಲೆನ್ಸ್ ಕಂಡುಬಂತು. ತಕ್ಷಣ ತಮ್ಮ ಭದ್ರತಾ ಸಿಬ್ಬಂದಿಗೆ ಇದರ ಬಗ್ಗೆ ರಾಹುಲ್ ವಿಚಾರಿಸಿದಾಗ ಇದು ಹೃದಯ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ಸಿದ್ಧವಾಗಿ ನಿಂತಿದ್ದ ಹೆಲಿಕಾಪ್ಟರ್ ಎಂದು ತಿಳಿದುಬಂತು.

ಹೀಗಾಗಿ ರಾಹುಲ್ ಮೊದಲು ಏರ್ ಆಂಬ್ಯುಲೆನ್ಸ್ ಗೆ ಮೊದಲು ಹಾರಾಟಕ್ಕೆ ಅವಕಾಶ ಕೊಟ್ಟು, ತಾವು ನಂತರ ಹೆಲಿಕಾಪ್ಟರ್ ಮೂಲಕ ಸಾಗಿದರು. ಈ ಮೂಲಕ ಒಂದು ಒಳ್ಳೆಯ ಕೆಲಸ ಮಾಡಿ ಮೆಚ್ಚುಗೆಗೆ ಪಾತ್ರರಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯ ಮೊದಲರಾತ್ರಿಯಲ್ಲಿ ಪರಪುರುಷನಿಂದ ವಧುವಿನ ಮೇಲೆ ಅತ್ಯಾಚಾರ. ಇದು ನಡೆದಿದ್ದು ಹೇಗೆ ಗೊತ್ತಾ?