Select Your Language

Notifications

webdunia
webdunia
webdunia
Friday, 25 April 2025
webdunia

ಸಿದ್ದರಾಮಯ್ಯ ವಿದೇಶ ಪ್ರವಾಸದ ಬಳಿಕ ಮೈತ್ರಿ ಸರ್ಕಾರದ ವಿಚ್ಛೇದನ: ಭವಿಷ್ಯ ನುಡಿದವರಾರು?

ಜಗದೀಶ್ ಶೆಟ್ಟರ್
ಗದಗ , ಮಂಗಳವಾರ, 28 ಆಗಸ್ಟ್ 2018 (16:44 IST)
ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ನ ಅಪವಿತ್ರ ಮೈತ್ರಿ ಸರ್ಕಾರ ಬಹಳ ದಿನ ಇರೋದಿಲಲ್ಲ.  ಸಿದ್ದರಾಮಯ್ಯ ವಿದೇಶ ಪ್ರವಾಸದ ಬಳಿಕ  ವಿಚ್ಚೇದನ ಪಡೆಯಲಿದೆ ಎಂದು ಮಾಜಿ ಸಿಎಂ ಭವಿಷ್ಯ ನುಡಿದಿದ್ದಾರೆ.

ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸ್ಥಳೀಯ ಸಂಸ್ಥೆಯ ಬಹಿರಂಗ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಬೆಂಬಲಿತ ಜೆಡಿಎಸ್  ಸರ್ಕಾರ ಬಹಳ ದಿನ ಉಳಿಯುವುದಿಲ್ಲ. ಸರ್ಕಾರ ಬೀಳಿಸಲಿಕ್ಕೆ ಸಿದ್ದರಾಮಯ್ಯ ಅವರು ತಂತ್ರ ಹೆಣೆದು 20 ರಿಂದ 30 ಶಾಸಕರನ್ನು ಕರೆದುಕೊಂಡು ವಿದೇಶ ಪ್ರವಾಸಕ್ಕೆ ಹೊರಟಿದ್ದಾರೆ. ಅವರು ಬರೋ ವೇಳೆಗೆ ಈ ಮೈತ್ರಿ ಸರ್ಕಾರ  ಬೀಳಲಿದೆ ಎಂದು ಹೇಳಿದ್ದಾರೆ.

ಈಗಾಗಲೇ ಕಾಂಗ್ರೆಸ್ ಮತ್ತು ಜನಾದೇಶದ ವಿರುದ್ದ ಜೆಡಿಎಸ್ ಅಪವಿತ್ರ ಮೈತ್ರಿ ಮದುವೆ ಮಾಡಿಕೊಂದ್ದಾರೆ. ಸದ್ಯದಲ್ಲೆ ವಿಚ್ಚೇದನ ಪಡಿಯಲಿದೆ ಎಂದು ಶೆಟ್ಟರ್ ಲೇವಡಿ ಮಾಡಿದರು.



 

Share this Story:

Follow Webdunia kannada

ಮುಂದಿನ ಸುದ್ದಿ

ಬಡವರ ಹಣ ಪೀಕುತ್ತಿರುವ ಸರಕಾರಿ ವೈದ್ಯೆ!