Publish Date: Mon, 27 Aug 2018 (17:06 IST)
Updated Date: Mon, 27 Aug 2018 (17:09 IST)
ಬಿಜೆಪಿಯವರು ಹೆಸರಿಗೆ ಮಾತ್ರ ಜೈಶ್ರೀರಾಮ ಅಂತಾರೆ, ಮಾಡೋದೆಲ್ಲ ಕೆಟ್ಟ ಕೆಲಸಗಳು ಮತ್ತು ಬಿಜೆಪಿಯವರು ಅಧಿಕಾರಕ್ಕಾಗಿ ಯಾವೆಲ್ಲ ಕೆಟ್ಟ ಕೆಲಸಗಳನ್ನ ಮಾಡಬೇಕೋ ಅದನ್ನೆಲ್ಲ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಗಂಭೀರ ಆರೋಪ ಮಾಡಿದ್ದಾರೆ.
ಹಾವೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಸ್ಥಳೀಯ ಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಬಿಜೆಪಿ ವಿರುದ್ಧ ಟಾಂಗ್ ನೀಡಿದರು.
ಬಿಜೆಪಿಯವರು ರಾಜ್ಯಕ್ಕೆ ಕೇಂದ್ರದಿಂದ ನ್ಯಾಯ ಕೊಡಿಸಲು ಹೋರಾಟ ಮಾಡ್ತಿಲ್ಲ. ಸಮರ್ಥ ವಿರೋಧ ಪಕ್ಷವಾಗಿಯೂ ಕೆಲಸ ಮಾಡ್ತಿಲ್ಲ, ಅಧಿಕಾರಕ್ಕಾಗಿ ಅನೈತಿಕ ಕೆಲಸ ಮಾಡುತ್ತಾ ಕಾಲ ಕಳಿಯುತ್ತಿದ್ದಾರೆಂದು ಹೇಳಿದ್ರು. ಇನ್ನೂ ಐದು ವರ್ಷಗಳ ಕಾಲ ಸಮ್ಮಿಶ್ರ ಸರಕಾರ ಇರುತ್ತೆ. ಸಾಲಮನ್ನಾ, ಅನ್ನಭಾಗ್ಯ ಸೇರಿದಂತೆ ಯಾವುದೇ ಯೋಜನೆ ಬಗ್ಗೆ ಸಮನ್ವಯ ಸಮಿತಿಯಲ್ಲಿ ಚರ್ಚಿಸಿಯೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
ಹಿಂದಿನ ಕಾಂಗ್ರೆಸ್ ಸರಕಾರ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ. ಈಗಲೂ ಸಮ್ಮಿಶ್ರ ಸರಕಾರ ಇದೆ. ಹೀಗಾಗಿ ಫಲಿತಾಂಶ ಕಾಂಗ್ರೆಸ್ ಪರವಾಗಿ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.