Publish Date: Sun, 26 Aug 2018 (09:22 IST)
Updated Date: Sun, 26 Aug 2018 (09:23 IST)
ನವದೆಹಲಿ: ಜರ್ಮನಿ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂವಾದ ಕಾರ್ಯಕ್ರಮವೊಂದರಲ್ಲಿ ಡೋಕ್ಲಾಂ ಗಡಿ ವಿವಾದದ ಬಗ್ಗೆ ನೀಡಿದ ಹೇಳಿಕೆ ಭಾರೀ ಟೀಕೆಗೆ ಗುರಿಯಾಗಿದೆ.
ಸದಾ ಡೋಕ್ಲಾಂ ಗಡಿ ವಿವಾದದ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಟೀಕಿಸುವ ರಾಹುಲ್ ಗೆ ಈ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆ ಕೇಳಲಾಯಿತು. ಆದರೆ ಇದರ ಬಗ್ಗೆ ಚರ್ಚಿಸಲು ನನಗೆ ಡೋಕ್ಲಾಂ ಬಗ್ಗೆ ಹೆಚ್ಚು ಮಾಹಿತಿಯಿಲ್ಲ ಎಂದು ರಾಹುಲ್ ಉತ್ತರಿಸಿದ್ದರು.
ಇದನ್ನೇ ಮುಂದಿಟ್ಟುಕೊಂಡು ಇದೀಗ ಬಿಜೆಪಿ ಟೀಕಾಪ್ರಹಾರ ನಡೆಸುತ್ತಿದೆ. ತನ್ನ ಸಾಮಾಜಿಕ ಜಾಲತಾಣ ಪುಟದಲ್ಲಿ ಬಿಜೆಪಿ ‘ಸದಾ ಡೋಕ್ಲಾಂ ವಿವಾದದ ಬಗ್ಗೆ ಭಾಷಣ ಮಾಡುವ ರಾಹುಲ್ ಗೆ ಡೋಕ್ಲಾಂ ವಿಚಾರವೇ ಗೊತ್ತಿಲ್ಲವಂತೆ. ಹಾಗಿದ್ದರೆ ಅವರು ಇಷ್ಟು ದಿನ ಯಾವ ಆಧಾರದ ಮೇಲೆ ಟೀಕೆ ಮಾಡುತ್ತಿದ್ದರು’ ಎಂದು ಕುಟುಕಿದೆ. ರಾಹುಲ್ ಮಾತನಾಡುವ ಈ ವಿಡಿಯೋ ಈಗ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.