Publish Date: Mon, 27 Aug 2018 (08:23 IST)
Updated Date: Mon, 27 Aug 2018 (08:25 IST)
ಬೆಂಗಳೂರು: ಕೇರಳ ಪ್ರವಾಹದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಗೆ ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.
ಕೇರಳದಲ್ಲಿ ಬಹಿರಂಗವಾಗಿ ಗೋ ಹತ್ಯೆ ಮಾಡಿದ್ದಕ್ಕೆ ಪ್ರವಾಹವಾಯಿತು ಎಂಬ ಬಸನಗೌಡ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಇದಕ್ಕೆ ತಿರುಗೇಟು ಕೊಟ್ಟಿರುವ ಮಾಜಿ ಸಿಎಂ ಸಿದ್ದರಾಮಯ್ಯ ‘ಗೋವಾದಲ್ಲೂ ಅವರದ್ದೇ ಸರ್ಕಾರವಿದೆಯಲ್ರೀ... ಅಲ್ಲಿ ಗೋ ಹತ್ಯೆ ನಡೆಯುತ್ತಿಲ್ವಾ? ಅದಕ್ಕೆ ಏನು ಹೇಳ್ತಾರೆ ಅವರು? ಗೋ ಹತ್ಯೆಗೂ ಪ್ರವಾಹಕ್ಕೂ ಏನೂ ಸಂಬಂಧವಿಲ್ಲ’ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
Krishnaveni K
Publish Date: Mon, 27 Aug 2018 (08:23 IST)
Updated Date: Mon, 27 Aug 2018 (08:25 IST)