Publish Date: Mon, 27 Aug 2018 (08:17 IST)
Updated Date: Mon, 27 Aug 2018 (08:19 IST)
ಬೆಂಗಳೂರು: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಕೊಡಗು ಪ್ರವಾಸದ ವೇಳೆ ನಡೆದ ವಿವಾದಕ್ಕೆ ಸಿಎಂ ಕುಮಾರಸ್ವಾಮಿ ತೇಪೆ ಹಚ್ಚುವ ಪ್ರಯತ್ನ ಮಾಡಿದ್ದಾರೆ.
ನಿರ್ಮಲಾ ಸೀತಾರಾಂ ಕೊಡಗು ಪ್ರವಾಸದ ವೇಳೆ ಜಿಲ್ಲಾ ಉಸ್ತುವಾರಿ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ ಸಿಎಂ ಕುಮಾರಸ್ವಾಮಿ ಅತ್ತ ರಕ್ಷಣಾ ಸಚಿವರಿಗೂ ಇತ್ತ ಜಿಲ್ಲಾ ಉಸ್ತುವಾರಿ ಸಚಿವರಿಗೂ ನೋವಾಗದಂತೆ ವಿವಾದ ತಣ್ಣಗಾಗಿಸಲು ಪ್ರಯತ್ನಿಸಿದ್ದಾರೆ.
ಕೊಡಗು ಪ್ರವಾಹದ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಜನರ ಸಂಕಷ್ಟಕ್ಕೆ ನೆರವಾಯಿತು. ರಕ್ಷಣಾ ಸಚಿವರು ಪರಿಹಾರ ಕಾರ್ಯ ವೀಕ್ಷಿಸಲು ಕೊಡಗಿಗೆ ಬಂದಾಗ ನಡೆದ ಅನನುಕೂಲಕ್ಕೆ ವಿಷಾಧಿಸುತ್ತೇನೆ. ಈ ಬಗ್ಗೆ ಅವರೊಂದಿಗೂ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಪರಿಹಾರ ಕಾರ್ಯದಲ್ಲಿ ಕೇಂದ್ರವೂ ನಮ್ಮ ಬೆಂಬಲಕ್ಕೆ ನಿಂತಿದೆ ಎಂದಿದ್ದಾರೆ. ಆ ಮೂಲಕ ವಿವಾದ ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.