Select Your Language

Notifications

webdunia
webdunia
webdunia
webdunia

‘ಹೇಗೆ ನಡೆದುಕೊಳ್ಳಬೇಕೆಂದು ನಾವು ಹೇಳಿಕೊಡಬೇಕಾ?’: ಸಚಿವೆ ನಿರ್ಮಲಾ ವಿರುದ್ಧ ಡಿಸಿಎಂ ಪರಂ ಗರಂ

ಜಿ ಪರಮೇಶ್ವರ್
ಬೆಂಗಳೂರು , ಶನಿವಾರ, 25 ಆಗಸ್ಟ್ 2018 (09:20 IST)
ಬೆಂಗಳೂರು: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಕೊಡಗು ಪ್ರವಾಹ ಪೀಡಿತ ಪ್ರದೇಶಗಳ ಭೇಟಿ ಸಂದರ್ಭದಲ್ಲಿ ನಡೆದುಕೊಂಡ ರೀತಿಗೆ ಡಿಸಿಎಂ ಜಿ ಪರಮೇಶ್ವರ್  ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 

ಅಧಿಕಾರಿಗಳ ಜತೆ ಗರಂ ಆಗಿ ನಡೆದುಕೊಂಡ ಸಚಿವೆ ನಿರ್ಮಲಾ, ಸಚಿವರ ಜತೆ ಸಿಡಿಮಿಡಿಗೊಳ್ಳುತ್ತಲೇ ಮಾತನಾಡಿದ್ದರು. ಅಷ್ಟೇ ಅಲ್ಲದೆ, ಸಭೆಯಲ್ಲೂ ಸರಿಯಾಗಿ ಸಮಸ್ಯೆ ಆಲಿಸಿಕೊಳ್ಳಲಿಲ್ಲ ಎಂಬ ಆರೋಪಗಳ ಬಗ್ಗೆ ಡಿಸಿಎಂ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

‘ಅವರು ನಮ್ಮ ರಾಜ್ಯದಿಂದಲೇ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಯಾದವರು. ಅವರಿಗೆ ಹೇಗೆ ನಡೆದುಕೊಳ್ಳಬೇಕೆಂದು ನಾವು ಹೇಳಿಕೊಡಬೇಕಾ? ತಾವೊಬ್ಬರ ರಕ್ಷಣಾ ಮಂತ್ರಿ ಎಂಬ ದುರಹಂಕಾರದಿಂದ ನಡೆದುಕೊಂಡಿದ್ದಾರೆ. ಸ್ಥಳೀಯ ಎಲ್ಲಾ ಪಕ್ಷದ ಶಾಸಕರು, ಸಂಸದರ ಜತೆ ಮಾತನಾಡಬೇಕಿತ್ತು’ ಎಂದು ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ನೆರೆ ಪರಿಹಾರಕ್ಕೆ ಭಾರೀ ಮೊತ್ತದ ಹಣ ನೀಡಲು ಸಿಎಂ ಎಚ್ ಡಿಕೆ ಪ್ರಧಾನಿ ಮೋದಿಗೆ ಪತ್ರ