Select Your Language

Notifications

webdunia
webdunia
webdunia
webdunia

ಜರ್ಮನಿಗೆ ಹೋಗಿ ಐಸಿಸ್ ಉಗ್ರರನ್ನು ಸರ್ಮಥಿಸಿದರೇ ರಾಹುಲ್ ಗಾಂಧಿ?!

ಜರ್ಮನಿಗೆ ಹೋಗಿ ಐಸಿಸ್ ಉಗ್ರರನ್ನು ಸರ್ಮಥಿಸಿದರೇ ರಾಹುಲ್ ಗಾಂಧಿ?!
ನವದೆಹಲಿ , ಶುಕ್ರವಾರ, 24 ಆಗಸ್ಟ್ 2018 (08:21 IST)
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜರ್ಮನಿಯಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಐಸಿಸ್ ಉಗ್ರರನ್ನು ಸಮರ್ಥಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಅಭಿವೃದ್ಧಿ ವಿಚಾರದಲ್ಲಿ ಮೋದಿ ಸರ್ಕಾರವನ್ನು ಟೀಕಿಸುವ ಭರದಲ್ಲಿ ರಾಹುಲ್ ಐಸಿಸ್ ಉಗ್ರ ಸಂಘಟನೆಯನ್ನು ಸಮರ್ಥಿಸಿದರು ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ರಾಹುಲ್ ಕ್ಷಮೆ ಯಾಚಿಸಬೇಕು ಎಂದೂ ಬಿಜೆಪಿ ಆಗ್ರಹಿಸಿದೆ.

ಅಭಿವೃದ್ಧಿ ಕೆಲಸಗಳಿಂದ ಬಹುದೊಡ್ಡ ಪ್ರಮಾಣದ ಜನರನ್ನು ದೂರವಿಡುವುದರಿಂದ ಐಸಿಸ್ ನಂತಹ ಉಗ್ರ ಸಂಘಟನೆಗಳು ಹುಟ್ಟಿಕೊಳ್ಳುತ್ತವೆ ಎಂದು ರಾಹುಲ್ ಗಾಂಧಿ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಬಿಜೆಪಿ ಈ ಆರೋಪ ಮಾಡಿದೆ. ಅಷ್ಟೇ ಅಲ್ಲದೆ, ಭಾರತದಲ್ಲಿ ಮಹಿಳೆಯರು ಸುರಕ್ಷಿತರಾಗಿಲ್ಲ ಎನ್ನುವ ಮೂಲಕ ರಾಹುಲ್ ಗಾಂಧಿ ವಿದೇಶದಲ್ಲಿ ಭಾರತದ ಮಾನ ಕಳೆದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಒಳಿತಿಗೇ ಅಜ್ಮೀರಕ್ಕೆ ಭೇಟಿ ನೀಡಿದೆ ಎಂದ ಸಿಎಂ ಕುಮಾರಸ್ವಾಮಿ