Publish Date: Fri, 24 Aug 2018 (08:16 IST)
Updated Date: Fri, 24 Aug 2018 (08:18 IST)
ಬೆಂಗಳೂರು: ಒಂದೆಡೆ ಕೊಡಗಿನಲ್ಲಿ ಪ್ರವಾಹದಿಂದಾಗಿ ಜನರು ಮರಳಿ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದರೆ, ಸಿಎಂ ಕುಮಾರಸ್ವಾಮಿ ಅಜ್ಮೀರದಲ್ಲಿ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಲು ತೆರಳಿದ್ದಾರೆ.
ಅಜ್ಮೀರದ ದರ್ಗಾಕ್ಕೆ ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ ಜತೆಗೆ ಪತ್ನಿ ಅನಿತಾ ಕುಮಾರಸ್ವಾಮಿ, ಎಚ್ ಡಿ ದೇವೇಗೌಡ ಸೇರಿದಂತೆ ಕುಟುಂಬ ವರ್ಗವೇ ತೆರಳಿದೆ. ಮುಸ್ಲಿಂ ಟೋಪಿ ಧರಿಸಿ ಎಚ್ ಡಿಕೆ ಕುಟುಂಬ ಚಾದರ ಅರ್ಪಿಸಿ ಹರಕೆ ತೀರಿಸಿದೆ. ಜ್ಯೋತಿಷಿಯೊಬ್ಬರು ಸಲಹೆ ಮೇರೆಗೆ ಸಿಎಂ ಈ ರೀತಿ ಟೆಂಪಲ್ ರನ್ ಮಾಡುತ್ತಿದ್ದಾರೆ ಎಂಬ ಗುಸು ಗುಸು ಇದೆ.
ಆದರೆ ಮಾಧ್ಯಮಗಳು ಪ್ರಶ್ನಿಸಿದಾಗ ರಾಜ್ಯದ ಒಳಿತಿಗಾಗಿ ಇಲ್ಲಿಗೆ ಬಂದಿದ್ದೇನೆ. ರಾಜ್ಯದ ಜನರಿಗೆ ಒಳಿತು ಮಾಡು ಎಂದು ಬೇಡಿಕೊಂಡೆ ಎಂದಿದ್ದಾರೆ. ಆದರೆ ರಾಜ್ಯದಲ್ಲಿ ಸಂಕಷ್ಟಗಳಿರುವಾಗಲೂ ಸಿಎಂ ಎಚ್ ಡಿಕೆ ಈ ರೀತಿ ಟೆಂಪಲ್ ರನ್ ಮಾಡುತ್ತಿರುವುದಕ್ಕೆ ವ್ಯಾಪಕ ಟೀಕೆಯೂ ವ್ಯಕ್ತವಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.