Publish Date: Thu, 23 Aug 2018 (11:12 IST)
Updated Date: Thu, 23 Aug 2018 (11:14 IST)
ಬೆಂಗಳೂರು: ತಮ್ಮ ಪುತ್ರನ ಮದುವೆ ಮಾಡಿ ಅದ್ಧೂರಿಯಾಗಿ ಬೀಗರ ಔತಣಕೂಟ ಏರ್ಪಡಿಸಲು ತಯಾರಿ ಮಾಡಿದ್ದ ಸಚಿವ ಸಿಎಸ್ ಪುಟ್ಟರಾಜು ಇದೀಗ ಅದೇ ಹಣವನ್ನು ಕೊಡಗು ನೆರೆ ಸಂತ್ರಸ್ತರಿಗೆ ನೀಡಿದ್ದಾರೆ.
ಪುತ್ರನ ಮದುವೆ ಬಳಿಕ ಬೀಗರ ಔತಣಕೂಟಕ್ಕೆಂದು 10 ಲಕ್ಷ ರೂ. ಖರ್ಚು ಮಾಡಲು ಯೋಚಿಸಿದ್ದ ಸಚಿವ ಪುಟ್ಟರಾಜು ಅದೇ ಹಣವನ್ನು ಕೊಡಗು ಸಂತ್ರಸ್ತರಿಗೆ ನೀಡಿದ್ದಾರೆ.
ಕೊಡಗಿನ ಋಣ ತಮ್ಮ ಮೇಲಿದೆ. ಅವರು ಕಷ್ಟದಲ್ಲಿರುವಾಗ ನಾವು ಅದ್ಧೂರಿ ಔತಣಕೂಟ ಮಾಡಿ ಸಂಭ್ರಮಿಸುವುದು ಸರಿಯಲ್ಲ ಎಂದು ಈ ನಿರ್ಧಾರಕ್ಕೆ ಬಂದಿರುವುದಾಗಿ ಸಚಿವರು ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.