Select Your Language

Notifications

webdunia
webdunia
webdunia
webdunia

ಬಿಜೆಪಿಯಲ್ಲಿದ್ದುಕೊಂಡೇ ಪಕ್ಷಕ್ಕೆ ಟಾಂಗ್ ನೀಡಿದ ಮಾಜಿ ಸಚಿವ!

ಸೊಗಡು ಶಿವಣ್ಣ-ಮಾಜಿ ಸಚಿವ
ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯಲ್ಲಿ ಸ್ವಪಕ್ಷದ ನಾಯಕರ ವಿರುದ್ಧ ಮಾಜಿ ಸಚಿವ ಮತ್ತೆ ಗುಡುಗಿದ್ದಾರೆ.

ಬಿಜೆಪಿ ಮಾಜಿ ಸಚಿವ ಸೊಗಡು ಶಿವಣ್ಣ ಸ್ವ ಪಕ್ಷದ ವಿರುದ್ಧವೇ ಗುಡುಗಿದ್ದಾರೆ. ತುಮಕೂರು ಮಹಾನಗರ ಪಾಲಿಕೆ ಚುನಾವಣೆಯ ಬಿಜೆಪಿ ಟಿಕೆಟ್ ಬಿಕರಿಯಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಶಿವಣ್ಣ ಸ್ಪೋಟಕ ಹೇಳಿಕೆ ನೀಡಿದ್ದಾರೆ. ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹಾಗೂ ಮಾಜಿ ಸಂಸದ ಜಿ.ಎಸ್.ಬಸವರಾಜು ಟಿಕೆಟ್ ಗಳನ್ನು ಲಕ್ಷ ಲಕ್ಷಕ್ಕೆ ಮಾರಿದ್ದಾರೆ ಎಂದು ಆರೋಪಿಸಿದ್ದಾರೆ.

ತಮ್ಮ ಬೆಂಬಲಿಗರಿಗೆ ಹಾಗೂ ಸಜ್ಜನರಿಗೆ ಟಿಕೆಟ್ ನೀಡದೇ, ಮಾಫಿಯಾ ಡಾನ್ ಗಳಿಗೆ ಟಿಕೆಟ್ ನೀಡಿದ್ದಾರೆ ಎಂದು ಆಪಾದಿಸಿದ್ದಾರೆ. ಜಿಲ್ಲೆಯ ನಾಲ್ಕೂ  ಬಿಜೆಪಿ ಶಾಸಕರು ನಿಷ್ಕ್ರಿಯವಾಗಿದ್ದಾರೆ. ಹಿಂದೆ ಕಾಂಗ್ರೆಸ್ ನಲ್ಲಿ ಇದ್ದುಕೊಂಡು ವಾಜಪೇಯಿ, ಅಡ್ವಾಣಿ ಅವರನ್ನ  ಲಘುವಾಗಿ ಮಾತನಾಡಿದವರು ಇಂದು ಬಿಜೆಪಿ ಆಳುತಿದ್ದಾರೆ ಎಂದು ಶಾಸಕ ಜ್ಯೋತಿಗಣೇಶ್  ಹಾಗೂ ಮಾಜಿ ಸಂಸದ ಜಿ.ಎಸ್.ಬಸವರಾಜು ವಿರುದ್ದ ವಾಗ್ದಾಳಿ ನಡೆಸಿದ್ದಾರೆ.



 


Share this Story:

Follow Webdunia kannada

ಮುಂದಿನ ಸುದ್ದಿ

ಸದ್ದಿಲ್ಲದೇ ಸಾಗಿದೆ ಶ್ರೀಗಂಧದ ಕಟ್ಟಿಗೆ ಅಕ್ರಮ ಸಾಗಾಟ!