Select Your Language

Notifications

webdunia
webdunia
webdunia
webdunia

ಅಡುಗೆಗೆ ಬಳಸುವ ಈ ಸಾಂಬಾರು ಪದಾರ್ಥದಿಂದ ದೇಹದ ತೂಕ ಇಳಿಸಬಹುದಂತೆ

ಅಡುಗೆಗೆ ಬಳಸುವ ಈ ಸಾಂಬಾರು ಪದಾರ್ಥದಿಂದ ದೇಹದ ತೂಕ ಇಳಿಸಬಹುದಂತೆ
ಬೆಂಗಳೂರು , ಶುಕ್ರವಾರ, 23 ಮಾರ್ಚ್ 2018 (12:57 IST)
ಬೆಂಗಳೂರು : ಅಡುಗೆಗೆ ಬಳಸುವ ಪದಾರ್ಥಗಳಲ್ಲಿ ಕರಿಮೆಣಸು ಒಂದು. ಇದು ಅಡುಗೆಯ ರುಚಿ ಹೆಚ್ಚಿಸುವುದರ ಜೊತೆಗೆ ದೇಹದ ತೂಕವನ್ನು ಕೂಡ ಇಳಿಸುತ್ತದೆ ಎಂದು ಸಂಶೋಧನೆಯೊಂದರಿಂದ ತಿಳಿದುಬಂದಿದೆ.


ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ಯೂನಿವರ್ಸಿಟಿ ಸಂಶೋಧಕರು ಕರಿ ಮೆಣಸು ಕುರಿತು ಅಧ್ಯಯನ ನಡೆಸಿ, ಕರಿ ಮೆಣಸನ್ನು ಸೇವಿಸುವುದರಿಂದ ತೂಕ ಕಡಿಮೆಯಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ.


ಮೆಣಸಿನಲ್ಲಿರುವ ಪೈಪೆರೋನಾಲ್ ಕಾಂಪೌಂಡ್ ಕುರಿತು ಅಧ್ಯಯನ ನಡೆಸಿದ ಇವರು  ಇದರ ಭಾಗವಾಗಿ ಕೊಬ್ಬು ಅಧಿಕವಾಗಿರುವ ಆಹಾರದಲ್ಲಿ ಕರಿಮೆಣಸನ್ನು ಬೆರೆಸಿ 6 ವಾರಗಳ ಕಾಲ ಇಲಿಗಳಿಗೆ ತಿನ್ನಿಸಿದ್ದಾರೆ. ಉಳಿದ ಇಲಿಗಳಿಗೆ ಕೊಬ್ಬು ಅಧಿಕವಾಗಿರುವ ಆಹಾರವನ್ನು ಇಟ್ಟಿದ್ದಾರೆ. ಫಲಿತಾಂಶವನ್ನು ಪರಿಶೀಲಿಸಿದಾಗ ಪೈಪೆರೋನಾಲ್ ಆಹಾರ ಸೇವಿಸಿದ ಇಲಿಗಳು ಉಳಿದ ಇಲಿಗಳೊಂದಿಗೆ ಹೋಲಿಸಿದರೆ ಅವುಗಳ ದೇಹದ ತೂಕ ಕಡಿಮೆಯಾಗಿವೆ. ಅಲ್ಲದೆ ರಕ್ತದಲ್ಲಿ ಗ್ಲೂಕೋಸ್ ಮಟ್ಟವೂ ಹತೋಟಿಗೆ ಬಂದು ಮೂಳೆಗಳು ಸಹ ಗಟ್ಟಿಗೊಂಡಿವೆ ಎಂದು ತಿಳಿದುಬಂದಿದೆ.
ಆದ್ದರಿಂದ ಕರಿಮೆಣಸು ಸೇವಿಸುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ ಎಂಬುದನ್ನು ಈ ಸಂಶೋಧನೆ ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೊಣಕಾಲು, ಕೀಲುನೋವುಗಳಿಂದ ಮುಕ್ತಿ ಪಡೆಯಬೇಕೆ…? ಹಾಗಾದ್ರೆ ಹುಣಿಸೆ ಹಣ್ಣಿನ ಬೀಜ ಉಪಯೋಗಿಸಿ