Publish Date: Thu, 08 Mar 2018 (16:43 IST)
Updated Date: Thu, 08 Mar 2018 (16:48 IST)
ಬೆಂಗಳೂರು : ಸಂಗೀತವೆಂದರೆ ಯಾರಿಗೆ ತಾನೆ ಇಷ್ಟವಿರಲ್ಲ ಹೇಳಿ. ಸಂತೋಷ ಹೆಚ್ಚಾದಾಗ ಸಂಗೀತ ಕೇಳುವ ಮನಸ್ಸು ಎಲ್ಲರಿಗೂ ಇರುತ್ತದೆ. ಬಾಡಿ ಹೋದ ಹೃದಯಕ್ಕೂ ಸಂಗೀತ ಬೆಚ್ಚಗಿನ ಸ್ಪರ್ಶ ನೀಡುತ್ತದೆ. ಇದೀಗ ಸಂಗೀತದಲ್ಲಿ ಸೆಕ್ಸ್‌ಗೆ ಸಂಬಂಧಿಸಿದ ಸಮಸ್ಯೆಗೂ ಸಹ ಪರಿಹಾರ ಇದೆ ಎಂಬುದು ಹೊಸದೊಂದು ಸಂಶೋಧನೆ ಮೂಲಕ ತಿಳಿದು ಬಂದಿದೆ.
ಹೌದು. ಲೌಡ್ ಮ್ಯೂಸಿಕ್ ಅಥವಾ ಜೋರಾಗಿ ಮ್ಯೂಸಿಕ್ ಇಟ್ಟು ಸೆಕ್ಸ್ ಮಾಡುವುದರಿಂದ ನಿಮಗೆ ಹೆಚ್ಚಿನ ಸುಖ ಸಿಗುತ್ತದೆ ಎಂದು ಸಂಶೋಧನೆ ಮೂಲಕ ತಿಳಿದು ಬಂದಿದೆ.
ಈ ಸಂಶೋಧನೆಗಾಗಿ ಆಡಿಯೋ ಹಾರ್ಡ್‌ವೇರ್ ಕಂಪನಿ ಸೋನೋಸ್ ಮತ್ತು ಆ್ಯಪಲ್ ಮ್ಯೂಸಿಕ್ 30,000 ಜನರನ್ನು ಸಮೀಕ್ಷೆಗೆ ಒಳಪಡಿಸಿತ್ತು. ಇದಕ್ಕಾಗಿ ಜಗತ್ತಿನಾದ್ಯಂತದ 109 ಜನರನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ಸಂಗೀತ ಕೇಳಿದ ನಂತರ 67 ಶೇಕಡಕ್ಕೂ ಹೆಚ್ಚಿನ ಜನ ಅಧಿಕ ಸೆಕ್ಸ್ ಸುಖ ಅನುಭವಿಸಿದರು ಎಂಬುದು ತಿಳಿದು ಬಂದಿದೆ. ಸಂಗೀತ ಕೇಳುವುದರಿಂದ ನ್ಯೂರೋಟ್ರಾನ್ಸ್‌ಮೀಟರ್ ಆಕ್ಸಿಟೋನ್ ಎಂಬ ಲವ್ ಹಾರ್ಮೋನ್ ಸಹ ಬಿಡುಗಡೆಯಾಗುತ್ತದೆ ಎಂದು ಈ ಸಂಶೋಧನೆಯಿಂದ ತಿಳಿದು ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ