ಬೆಂಗಳೂರು : ನಾವು ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗಾಗಿ ಚಿನ್ನವನ್ನು ಖರೀದಿಸುತ್ತೇವೆ. ಆದರೆ ಆಭರಣ ಖರೀದಿ ಮಾಡುವಾಗ ಮುಹೂರ್ತ ನೋಡುವುದು ಉತ್ತಮ. ಏಕೆಂದರೆ ಲಕ್ಷ್ಮೀ ಸ್ವರೂಪವಾದ ಚಿನ್ನವನ್ನು ಮನೆಗೆ ಉತ್ತಮ ಮುಹೂರ್ತದಲ್ಲಿ ತಂದರೆ ಆ ಮನೆಯಲ್ಲಿ ಅಭಿವೃದ್ಧಿ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಚಿನ್ನದ ಆಭರಣ ಖರೀದಿಗೆ ಸೂಕ್ತ ಕಾಲ ಯಾವುದು, ಯಾವ ಸಮಯದಲ್ಲಿ ಖರೀದಿಸಬಾರದು ಎಂಬ ಮಾಹಿತಿ ಇಲ್ಲಿದೆ ನೋಡಿ
ಚಿನ್ನವನ್ನು ಪುಷ್ಯ, ಮೃಗಶಿರಾ, ಅನೂರಾಧ, ಶ್ರವಣ, ಶತಭಿಷಾ, ರೇವತಿ, ಅಶ್ವಿನಿ, ಪುನರ್ವಸು, ವಿಶಾಖ ನಕ್ಷತ್ರದಂದು ಸೋಮವಾರ, ಬುಧವಾರ, ಗುರುವಾರ, ಶುಕ್ರವಾರದಂದು ಖರೀದಿಸಿದರೆ ಉತ್ತಮ. ಆದರೆ ಶನಿವಾರ ಮಾತ್ರ ಚಿನ್ನವನ್ನು ಖರೀದಿಸಿಬಾರದು. ಶುಕ್ಲಪಕ್ಷದಲ್ಲೇ ಖರೀದಿಸಿದರೆ ಉತ್ತಮ. ಒಂದು ವೇಳೆ ಕೃಷ್ಣ ಪಕ್ಷ ಅನ್ನೋದಾದರೆ ಪಂಚಮಿ ತಿಥಿಯೊಳಗೆ ಖರೀದಿಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ