Select Your Language

Notifications

webdunia
webdunia
webdunia
webdunia

ಮೊಣಕಾಲು, ಕೀಲುನೋವುಗಳಿಂದ ಮುಕ್ತಿ ಪಡೆಯಬೇಕೆ…? ಹಾಗಾದ್ರೆ ಹುಣಿಸೆ ಹಣ್ಣಿನ ಬೀಜ ಉಪಯೋಗಿಸಿ

ಮೊಣಕಾಲು, ಕೀಲುನೋವುಗಳಿಂದ ಮುಕ್ತಿ ಪಡೆಯಬೇಕೆ…? ಹಾಗಾದ್ರೆ ಹುಣಿಸೆ ಹಣ್ಣಿನ ಬೀಜ ಉಪಯೋಗಿಸಿ
ಬೆಂಗಳೂರು , ಶುಕ್ರವಾರ, 23 ಮಾರ್ಚ್ 2018 (12:15 IST)
ಬೆಂಗಳೂರು : ಹುಣಿಸೆ ಹಣ್ಣು ಉಪಯೋಗಿಸುವಾಗ, ಅದರಲ್ಲಿರುವ ಬೀಜಗಳನ್ನು ತೆಗೆದು ಬಿಸಾಡುತ್ತೇವೆ. ಆದರೆ ಇನ್ನು ಮುಂದೆ ಹಾಗೆ ಮಾಡಬೇಡಿ ಯಾಕೆಂದರೆ ಹುಣಿಸೆ ಬೀಜಗಳು ನಮ್ಮ ಆರೋಗ್ಯಕ್ಕೆ ಎಷ್ಟು ಉಪಯೋಗಕಾರಿ  ಗೊತ್ತಾ.


ಹುಣಿಸೆ ಬೀಜಗಳನ್ನು ಚೆನ್ನಾಗಿ ಹುರಿಯಬೇಕು. ನಂತರ ಎರಡು ದಿನಗಳ ಕಾಲ ನೀರಿನಲಿ ನೆನೆಸಿಡಬೇಕು. ದಿನಕ್ಕೆ ಎರಡು ಸಲ ನೀರನ್ನು ಬದಲಾಯಿಸಬೇಕು. ಎರಡು ದಿನಗಳ ನಂತರ ಹುಣಿಸೆ ಬೀಜಗಳ ಸಿಪ್ಪೆಯನ್ನು ಬೇರ್ಪಡಿಸಬೇಕು. ನಂತರ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಂಡು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಮಿಕ್ಸಿಯಲ್ಲಿ ಪುಡಿಮಾಡಿ, ಗಾಜಿನ ಸೀಸೆಯಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು. ಈ ಪುಡಿಯನ್ನು ಪ್ರತೀ ದಿನ ಎರಡು ಸಲ ಅರ್ಧ ಚಮಚದಂತೆ ನೀರಿಗೆ ಅಥವಾ ಹಾಲಿಗೆ ಸಕ್ಕರೆ ಬೆರೆಸಿ ತೆಗೆದುಕೊಳ್ಳಬೇಕು.


ಹೀಗೆ ಮಾಡುವುದರಿಂದ, ಹುಣಿಸೆ ಬೀಜಗಳಲ್ಲಿರುವ ಔಷಧೀಯ ಗುಣಗಳಿಂದಾಗಿ ಎರಡು ಮೂರು ವಾರಗಳಲ್ಲಿ ಮೊಣಕಾಲುಗಳ ನೋವು ಕಡಿಮೆಯಾಗುತ್ತದೆ. ಅದೇ ರೀತಿ ಕೀಲುಗಳಲ್ಲಿ ಸವೆದಿರುವ ಭಾಗವನ್ನು ಪುನರ್ ನಿರ್ಮಿಸುತ್ತದೆ. ಇದರಿಂದ ಕೀಲು ನೋವುಗಳಿಂದ ಶಾಶ್ವತ ಮುಕ್ತಿ ದೊರೆಯುತ್ತದೆ.


ಇಷ್ಟೇ ಅಲ್ಲದೆ ಮೇಲೆ ತಿಳಿಸಿದ ರೀತಿಯಲ್ಲಿ ಉಪಯೋಗಿಸಿದರೆ ಅತಿಸಾರ, ಚರ್ಮ ವ್ಯಾಧಿಗಳು, ಅಜೀರ್ಣ,ತುರಿಕೆ. ದಂತ ಸಮಸ್ಯೆಗಳು ಕೆಮ್ಮು, ಗಂಟಲ ಸೋಂಕು, ಸಕ್ಕರೆ ಖಾಯಿಲೆ, ಹೃದಯ ಸಂಬಂಧೀ ಖಾಯಿಲೆಗಳಿಗೆ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ.


ಮೂಳೆಗಳು ಮುರಿದಾಗ ಆ ಭಾಗದಲ್ಲಿ ಪ್ರತೀ ದಿನ ಹುಣಿಸೆ ಬೀಜಗಳ ಪುಡಿಯನ್ನು ಪೇಸ್ಟ್ ಮಾಡಿ ಹಚ್ಚಿದರೆ, ಮೂಳೆಗಳು ಬೇಗನೆ ಕೂಡಿಕೊಳ್ಳುತ್ತವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೆಕ್ಸ್ ನಲ್ಲಿ ಗೆಲ್ಲಬೇಕಾದರೆ ಪುರುಷರು ಹೀಗೆ ಮಾಡಬೇಕು!