Select Your Language

Notifications

webdunia
webdunia
webdunia
webdunia

ಮದುವೆ ನಂತರ ಸೆಕ್ಸ್ ಗೆ ಮೊದಲು ಈ ಕೆಲವು ಅಂಶಗಳು ಗಮನದಲ್ಲಿರಲಿ!

ಮದುವೆ ನಂತರ ಸೆಕ್ಸ್ ಗೆ ಮೊದಲು ಈ ಕೆಲವು ಅಂಶಗಳು ಗಮನದಲ್ಲಿರಲಿ!
ಬೆಂಗಳೂರು , ಗುರುವಾರ, 22 ಮಾರ್ಚ್ 2018 (09:11 IST)
ಬೆಂಗಳೂರು: ದಾಂಪತ್ಯದ ಮತ್ತೊಂದು ಪ್ರಮುಖ ಅಂಗವೇ ಲೈಂಗಿಕ ಜೀವನ. ಹಾಗಂತ ಮದುವೆಗೆ ಮೊದಲು ಸೆಕ್ಸ್ ಗೆ ಅವಸರ ಮಾಡಿದರೆ ಅಪಾಯವೇ ಹೆಚ್ಚು ಎಂಬುದು ಗಮನದಲ್ಲಿರಲಿ. ಕೆಲವು ಅಂಶಗಳ ಬಗ್ಗೆ ನೂತನ ದಂಪತಿಗಳು ಗಮನಕೊಡಲೇ ಬೇಕು.
 

ಸಮಯ ಕೊಡಿ
ಮದುವೆಯಾದ ಮೇಲೆ ಇಬ್ಬರಿಗೂ ಜೀವನ ಹೊಸತು. ಒಬ್ಬರಿಗೊಬ್ಬರು ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯಬಹುದು. ಹಾಗಾಗಿ ಅದಕ್ಕಿಂತ ಮೊದಲು ಸೆಕ್ಸ್ ಗೆ ಆತುರಪಟ್ಟು ಸುಖ ಸಂಬಂಧ ಕಳೆದುಕೊಳ್ಳಬೇಡಿ.

ಸಂಕೋಚ
ಮದುವೆಗೆ ಮೊದಲು ಎಲ್ಲರಿಗೂ ಮನಸ್ಸು ಬಿಚ್ಚಿ ಎಲ್ಲವನ್ನೂ ಮಾತಾಡಿಕೊಳ್ಳಲು ಸಮಯ ಸಿಗದು. ಹಾಗಾಗಿ ಮದುವೆ ನಂತರ ಸಂಗಾತಿ ಬಳಿ ಸೆಕ್ಸ್ ವಿಚಾರ ಹೇಗೆ ಕೇಳುವುದು ಎನ್ನುವ ಆತಂಕವಿರುತ್ತದೆ. ಹಾಗಾಗಿ ಇದಕ್ಕೆ ಸ್ವಲ್ಪ ಸಮಯ ಕೊಡಿ. ಮೊದಲು ಪರಸ್ಪರ ಪ್ರೀತಿಸಿ ನಂತರವೇ ಮುಂದುವರಿಯಿರಿ!

ತಪ್ಪು ಮಾಡೋದು ಸಹಜ
ಮೊದಲ ಬಾರಿಗೆ ಮಿಲನ ಕ್ರಿಯೆ ನಡೆಸುವಾಗ ಹಲವು ಆತಂಕ, ತಪ್ಪುಗಳಾಗುವುದು ಸಹಜ. ಅದರಿಂದ ಕುಗ್ಗುವುದು ಬೇಡ. ಸಂಗಾತಿ ಜತೆ ಮುಕ್ತವಾಗಿ ನಿಮಗಿರುವ ಸಂಕೋಚ, ಆತಂಕಗಳನ್ನು ಹಂಚಿಕೊಳ್ಳಿ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೊಳೆಯುವ ಮುಖರವಿಂದಕ್ಕಾಗಿ ಇಲ್ಲಿದೆ ನೋಡಿ ಸುಲಭ ಉಪಾಯ