Publish Date: Fri, 23 Mar 2018 (09:13 IST)
Updated Date: Fri, 23 Mar 2018 (09:15 IST)
ಬೆಂಗಳೂರು: ತಾನು ಪುರುಷನೆಂಬ ಅಹಂ ಇಟ್ಟುಕೊಂಡು ಬೆಡ್ ರೂಂನಲ್ಲಿ ಸಂಗಾತಿ ಜತೆ ವ್ಯವಹರಿಸಿದರೆ ಸೆಕ್ಸ್ ಸಂತೋಷ ಕೊಡದು. ಸೆಕ್ಸ್ ಉತ್ಸಾಹದಾಯಕವಾಗಲು ಪುರಷರಿಗೆ ಒಂದಷ್ಟು ಟಿಪ್ಸ್ ಇಲ್ಲಿದೆ ನೋಡಿ.
ಪ್ರಾಮಾಣಿಕರಾಗಿ
ಸೆಕ್ಸ್ ಸಂದರ್ಭದಲ್ಲಿ ಪುರುಷರು ಸಾಮಾನ್ಯವಾಗಿ ತಾವೇ ಮೇಲು ಎಂಬ ಅಹಂ ಹೊಂದಿರುತ್ತಾರೆ. ಸ್ತ್ರೀಯರು ತಮಗೆ ಸುಖ ನೀಡಬೇಕು ಎಂಬ ಸ್ವಾರ್ಥ ಬಿಟ್ಟು, ಸಂಗಾತಿಗೆ ಸುಖ ಸಿಗಬೇಕಾದರೆ ಏನು ಮಾಡಬೇಕೋ ಅದನ್ನು ಮಾಡಲು ಕಲಿಯಿರಿ.
ಸಮಯ ಕೊಡಿ
ಸೆಕ್ಸ್ ಎಂದರೆ ತೀರಾ ದೇಹದ ಹಸಿವು ತೀರಿಸುವ ಯಾಂತ್ರಿಕ ಕೆಲಸವಾಗದಿರಲಿ. ಸಂಗಾತಿಯ ಇಷ್ಟ ಕಷ್ಟ ಅರಿತು, ಆಕೆಗೆ ಸಾಕಷ್ಟು ಸಮಯ ಕೊಡಿ. ಇದರಿಂದ ಒಬ್ಬರಿಗೊಬ್ಬರು ತೆರೆದುಕೊಳ್ಳುವಿರಿ.
ನಿಮ್ಮಂತೆಯೇ ಅವಳೂ
ನಿಮಗೆ ಹೇಗೆಲ್ಲಾ ಸೆಕ್ಸ್ ಬಗ್ಗೆ ಕಲ್ಪನೆಗಳು, ಬಯಕೆಗಳು ಇವೆಯೋ ಆಕೆಯೂ ಹಾಗೆ ಎನ್ನುವುದನ್ನು ಮರೆಯದಿರಿ. ಆಕೆಗೂ ಬೇಕಾದ ಹಾಗೆ ನಡೆದುಕೊಳ್ಳಲು ಅವಕಾಶ ಕೊಡಿ. ಇದರಿಂದ ಸುಮಧುರ ಲೈಂಗಿಕ ಜೀವನ ನಿಮ್ಮದಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ