Publish Date: Fri, 26 Mar 2021 (09:39 IST)
Updated Date: Fri, 26 Mar 2021 (09:41 IST)
ಚೆನ್ನೈ: ಚುನಾವಣೆ ಬಂತೆಂದರೆ ರಾಜಕೀಯ ಪಕ್ಷಗಳು, ನಾಯಕರು ಮತದಾರರನ್ನು ಸೆಳೆಯಲು ಥರ ಥರದ ಭರವಸೆ ಕೊಡುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಅಭ್ಯರ್ಥಿ ನೀಡಿದ ಭರವಸೆ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಪಕ್ಷೇತರ ಅಭ್ಯರ್ಥಿ ದುಲಂ ಸರವಣನ್ ತಮ್ಮ ಕ್ಷೇತ್ರದ ಮತದಾರರಿಗೆ ಮನೆಗೊಂದು ಹೆಲಿಕಾಪ್ಟರ್, ಚಂದ್ರಲೋಕಕ್ಕೆ ಟೂರ್ ಆಫರ್ ನೀಡಿದ್ದಾರೆ.
ಅಷ್ಟೇ ಅಲ್ಲ ಮದುವೆಗಳಿಗೆ ಚಿನ್ನಾಭರಣ, ಮೂರಂತಸ್ತಿನ ಮನೆ ಒದಗಿಸುವುದಾಗಿಯೂ ಸರವಣನ್ ಭರವಸೆ ನೀಡಿದ್ದಾರೆ. ಜೊತೆಗೆ ರಾಜಕೀಯ ನಾಯಕರು ನೀಡುವ ಪೊಳ್ಳು ಭರವಸೆಗಳಿಗೆ ಜನರು ಮರುಳಾಗಬಾರದು ಎಂದು ಮನವಿಯನ್ನೂ ಮಾಡಿದ್ದಾರೆ!