Select Your Language

Notifications

webdunia
webdunia
webdunia
webdunia

ಪತ್ನಿ ಪ್ರಿಯಕರನ ಹತ್ಯೆ ಮಾಡಿದ ಪತಿ

ಅಪರಾಧ ಸುದ್ದಿಗಳು
ಬೆಂಗಳೂರು , ಶುಕ್ರವಾರ, 26 ಮಾರ್ಚ್ 2021 (09:31 IST)
ಬೆಂಗಳೂರು: ಅನೈತಿಕ ಸಂಬಂಧ ಹೊಂದಿದ್ದ ಪತ್ನಿಯ ಪ್ರಿಯಕರನನ್ನು ಪತಿಯೇ ಹತ್ಯೆ ಮಾಡಿದ ಘಟನೆ ಬ್ಯಾಡರಹಳ್ಳಿಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


26 ವರ್ಷದ ಶಿವಕುಮಾರ್ ಎಂಬಾತ ಹತ್ಯೆಗೀಡಾದಾತ. 31 ವರ್ಷದ ಭರತ್ ಆರೋಪಿ. ಈತನ ಪತ್ನಿ ವಿನುತಾ ಮತ್ತು ಶಿವಕುಮಾರ್ ಅಕ್ರಮ ಸಂಬಂಧ ಹೊಂದಿದ್ದರು. ಎಂಟು ವರ್ಷಗಳ ಹಿಂದೆ ಭರತ್-ವಿನುತಾ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರು ಮಕ್ಕಳೂ ಇದ್ದಾರೆ.

ಹತ್ಯೆಗೀಡಾದ ಶಿವಕುಮಾರ್ ವಿನುತಾ ಊರಿನವನು. ಕೆಲಸ ಹುಡುಕಿಕೊಂಡು ಬಂದಿದ್ದ ಶಿವಕುಮಾರ್ ವಿನುತಾ ಮನೆಯಲ್ಲಿ ಉಳಿದುಕೊಂಡಿದ್ದ. ಈ ವೇಳೆ ಇವರಿಬ್ಬರೂ ಸಲುಗೆಯಿಂದ ಇದ್ದಿದ್ದಕ್ಕೆ ಭರತ್ ಜಗಳವಾಡಿದ್ದ. ಅದಾದ ಬಳಿಕ ಆತ ಮನೆಯಿಂದ ಹೊರಹೋಗಿದ್ದ.

ಇದೀಗ ಮತ್ತೆ ಶಿವಕುಮಾರ್ ವಿನುತಾಗೆ ಕರೆ ಮಾಡಿ ಮನೆಗೆ ಬರುವುದಾಗಿ ಹೇಳಿದ್ದ. ಆತ ಮನೆಗೆ ಬರುವ ವೇಳೆಗೆ ಹಬ್ಬದೂಟ ಮಾಡಳು ವಿನುತಾ ತಯಾರಾಗಿದ್ದಳು. ಇದನ್ನು ಗಮನಿಸಿದ ಭರತ್ ಮಂಚದ ಕೆಳಗೆ ಬಚ್ಚಿಟ್ಟುಕೊಂಡಿದ್ದ. ರಾತ್ರಿ ಮನೆಗೆ ಬಂದ ಶಿವಕುಮಾರ್-ವಿನುತಾ ಜೊತೆಯಾಗಿ ಕಾಲ ಕಳೆದಿದ್ದಾರೆ. ಬೆಳಗಿನ ಜಾವ ವಿನುತಾ ಸ್ನಾನ ಗೃಹಕ್ಕೆ ಹೋಗಿದ್ದಾಗ ಮಂಚದ ಕೆಳಗಿನಿಂದ ಹೊರಬಂದ ಭರತ್ ಚಾಕುವಿನಿಂದ ಹಲವು ಬಾರಿ ಇರಿದು ಶಿವಕುಮಾರ್ ಹತ್ಯೆ ಮಾಡಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊರರಾಜ್ಯದಿಂದ ಬೆಂಗಳೂರಿಗೆ ಬರಬೇಕಾದ್ರೆ ಈ ರೂಲ್ಸ್ ಕಡ್ಡಾಯ!