Daily Horoscope

Select Your Language

Notifications

webdunia
webdunia
webdunia
webdunia

ಶೀಲಕೆಡಿಸಿ ಬಾಯ್ಬಿಡದಂತೆ ಬಾಲಕಿಗೆ 5 ರೂ. ಆಫರ್ ಕೊಟ್ಟ!

ಅಪರಾಧ ಸುದ್ದಿಗಳು
ಭೋಪಾಲ್: 8 ವರ್ಷದ ಬಾಲಕಿಯ ಮೇಲೆ ಕಸದ ಗಾಡಿಯೊಳಗೆ ಮಾನಭಂಗ ಮಾಡಿದ ಕಾಮುಕನೊಬ್ಬ ಆಕೆ ಘಟನೆ ಬಗ್ಗೆ ಎಲ್ಲಿಯೂ ಬಾಯ್ಬಿಡದಂತೆ ಆಕೆಗೆ 5 ರೂ. ನೀಡಿದ ಘಟನೆ ಭೋಪಾಲ್ ನಲ್ಲಿ ನಡೆದಿದೆ.


ಮನೆಯ ಹೊರಗೆ ಆಡಿಕೊಂಡಿದ್ದ ಬಾಲಕಿಯನ್ನು ನೆರೆಮನೆಯಾತ ಕರೆದು ಆಕೆಗೆ ಹಣ ನೀಡಿ ಅಂಗಡಿಯಿಂದ ಒಂದು ಪ್ಯಾಕೆಟ್ ತಂಬಾಕು ತರುವಂತೆ ಸೂಚಿಸಿದ್ದ. ಬಾಲಕಿ ತಂಬಾಕು ತಂದು ನೆರೆಮನೆಯಾತನಿಗೆ ನೀಡಲು ಹೋದಾಗ ಆತ ಕಸದ ಗಾಡಿ ಬಳಿ ನಿಂತಿದ್ದ ವ್ಯಕ್ತಿಯನ್ನು ತೋರಿಸಿ ಆತನಿಗೆ ನೀಡುವಂತೆ ಸೂಚಿಸಿದ್ದ.

ಬಾಲಕಿ ಕಸದ ಗಾಡಿ ಬಳಿ ಹೋದಾಗ ಆಕೆಯನ್ನು ಗಾಡಿಯೊಳಗೆ ಎಳೆದೊಯ್ದ ಆರೋಪಿ ಮಾನಭಂಗ ಮಾಡಿದ್ದಾನೆ. ಬಳಿಕ ನಡೆದ ವಿಚಾರವನ್ನು ಎಲ್ಲಿಯೂ ಬಾಯ್ಬಿಡದಂತೆ ಆಕೆಯ ಕೈಯಲ್ಲಿ 5 ರೂ. ನೀಡಿ ಪರಾರಿಯಾಗಿದ್ದಾನೆ. ಆದರೆ ಮನೆಗೆ ಬಂದ ಬಾಲಕಿ ತನ್ನ ಮೇಲಾದ ಹೀನಕೃತ್ಯವನ್ನು ಬಾಯ್ಬಿಟ್ಟಿದ್ದಾಳೆ. ಈ ಸಂಬಂಧ ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ಯಾನ್ಸ್ ಮಾಡಿ, ಟೀ ಕುಡಿದ್ರೆ ನಮ್ಮ ಹೊಟ್ಟೆ ತುಂಬಲ್ಲ! ಬಿಜೆಪಿ, ಕಾಂಗ್ರೆಸ್ ವಿರುದ್ಧ ಆಕ್ರೋಶ