Select Your Language

Notifications

webdunia
webdunia
webdunia
webdunia

ಡ್ಯಾನ್ಸ್ ಮಾಡಿ, ಟೀ ಕುಡಿದ್ರೆ ನಮ್ಮ ಹೊಟ್ಟೆ ತುಂಬಲ್ಲ! ಬಿಜೆಪಿ, ಕಾಂಗ್ರೆಸ್ ವಿರುದ್ಧ ಆಕ್ರೋಶ

ಡ್ಯಾನ್ಸ್ ಮಾಡಿ, ಟೀ ಕುಡಿದ್ರೆ ನಮ್ಮ ಹೊಟ್ಟೆ ತುಂಬಲ್ಲ! ಬಿಜೆಪಿ, ಕಾಂಗ್ರೆಸ್ ವಿರುದ್ಧ ಆಕ್ರೋಶ
ಅಸ್ಸಾಂ , ಮಂಗಳವಾರ, 23 ಮಾರ್ಚ್ 2021 (09:08 IST)
ಅಸ್ಸಾಂ: ಮಾರ್ಚ್ 27 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬೇರೆ ಬೇರೆ ಪಕ್ಷಗಳ ರಾಷ್ಟ್ರೀಯ ನಾಯಕರು ಅಸ್ಸಾಂಗೆ ಬಂದು ಪ್ರಚಾರ ನಡೆಸಿದ್ದಾರೆ.


ಹೇಳಿ ಕೇಳಿ ಚಹಾ ಉತ್ಪಾದನೆಯಲ್ಲಿ ಅಗ್ರ ಸ್ಥಾನದಲ್ಲಿರುವ ಅಸ್ಸಾಂ ಜನರನ್ನು ಸೆಳೆಯಲು ಬಿಜೆಪಿ, ಕಾಂಗ್ರೆಸ್ ನಾಯಕರು ಅವರ ಜೊತೆ ಮಾತನಾಡಿ, ನೃತ್ಯ ಮಾಡಿ, ಚಹಾ ಕುಡಿದು ಪ್ರಚಾರ ಮಾಡಿದ್ದಾರೆ. ಆದರೆ ಇದರಿಂದ ನಮ್ಮ ಹೊಟ್ಟೆ ತುಂಬಲ್ಲ ಎಂದು ಚಹಾ ನೌಕರರು ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಕಿಡಿ ಕಾರಿದ್ದಾರೆ.

ಇಲ್ಲಿನ ಮತದಾರರ ಪೈಕಿ ಚಹಾ ಕಾರ್ಮಿಕರ ಮತ ನಿರ್ಣಾಯಕ. ಆದರೆ ಈ ಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳೇ ಇಲ್ಲ. ಅವರ ವೇತನವೂ ತೀರಾ ಕಡಿಮೆ. ಮೋದಿ ಸರ್ಕಾರ ಕಾರ್ಮಿಕರ ವೇತನವನ್ನು 50 ರೂ. ಏರಿಕೆ ಮಾಡಿತ್ತು. ಪ್ರಿಯಾಂಕಾ ಗಾಂಧಿ ಇತ್ತೀಚೆಗೆ ಪ್ರಚಾರ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿದಿನದ ವೇತನ 350 ರೂ.ಗೆ ನಿಗದಿಗೊಳಿಸುವುದಾಗಿ ಹೇಳಿದ್ದರು.

ಎಲ್ಲಾ ಪಕ್ಷಗಳೂ ಅಬ್ಬರದ ಪ್ರಚಾರ ನಡೆಸುತ್ತವೆಯೇ ಹೊರತು ನಮ್ಮ ಸಮಸ್ಯೆಗಳನ್ನು ಯಾರೂ ಸರಿಪಡಿಸುತ್ತಿಲ್ಲ ಎಂದು ಚಹಾ ಕಾರ್ಮಿಕರ ಒಕ್ಕೂಟ ಪ್ರತಿಭಟನೆ ನಡೆಸಿದೆ. ಪ್ರಿಯಾಂಕಾ ಗಾಂಧಿ ಚಹಾ ಕಾರ್ಮಿಕರೊಡನೆ ಚಹಾ ಎಲೆಗಳನ್ನು ಕಿತ್ತರು. ಬಿಜೆಪಿಯೂ ಹಲವು ಭರವಸೆಗಳನ್ನು ನೀಡಿದೆ. ಆದರೆ ಭರವಸೆಗಳು, ನಮ್ಮ ಜೊತೆ ಕುಣಿದು, ಚಹಾ ಸೇವಿಸುವುದರಿಂದ ನಮ್ಮ ಸಮಸ್ಯೆಗಳು ಬಗೆಹರಿಯಲ್ಲ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಾ ಗೃಹ ಸಚಿವ ಅನಿಲ್ ವಿರುದ್ಧ ಕಾನೂನು ಸಮರಕ್ಕಿಳಿದ ಪರಂಬೀರ್ ಸಿಂಗ್