ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿಜೆಐ ಬೋಬ್ಡೆ ಮುಂದಿನ ತಿಂಗಳು ನಿವೃತ್ತರಾಗಲಿದ್ದು, ಅವರ ಸ್ಥಾನಕ್ಕೆ ಉಚ್ಛ ನ್ಯಾಯಾಲಯದ ಪರಮೋನ್ನತ ಹುದ್ದೆ ನಿರ್ವಹಿಸುವವರು ಯಾರು ಎಂಬ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ಸಿಗಲಿದೆ.
ಈ ಸಂಬಂಧ ಕೇಂದ್ರ ಕಾನೂನು ಸಚಿವಾಲಯ ಸಿಜೆಐ ಬೋಬ್ಡೆ ಅವರಿಗೆ ತಮ್ಮ ಉತ್ತರಾಧಿಕಾರಿ ಯಾರಾಗಬಹುದು ಎಂದು ಸಲಹೆ ನೀಡುವಂತೆ ಕೋರಿತ್ತು. ಅದರಂತೆ ಸಿಜೆಐ ಬೋಬ್ಡೆ ತಮ್ಮ ಉತ್ತರಾಧಿಕಾರಿಯಾಗಿ ಆಂಧ್ರಪ್ರದೇಶ ಮೂಲಕ ನ್ಯಾಯಮೂರ್ತಿ ಎನ್ ವಿ ರಮಣ ಹೆಸರನ್ನು ನಾಮನಿರ್ದೇಶನ ಮಾಡಿದ್ದಾರೆ.
ಸಂಪ್ರದಾಯದ ಪ್ರಕಾರ ನಿರ್ಗಮಿಸುವ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಉತ್ತರಾಧಿಕಾರಿಯ ಹೆಸರನ್ನು ಸೂಚಿಸಬೇಕು. ಅದರಂತೆ ಎನ್ ವಿ ರಮಣ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ. ಏಪ್ರಿಲ್ 23 ರಂದು ಬೋಬ್ಡೆಯವರು ನಿವೃತ್ತರಾಗಲಿದ್ದಾರೆ. ಮುಖ್ಯ ನ್ಯಾಯಮೂರ್ತಿಯಾಗಿ ಎನ್ ವಿ ರಮಣ ಅಧಿಕಾರ ಸ್ವೀಕರಿಸಿದರೆ ಮುಂದಿನ ಒಂದು ವರ್ಷ ನಾಲ್ಕು ತಿಂಗಳು ಅವರ ಅಧಿಕಾರಾವಧಿಯಿರುತ್ತದೆ.