Publish Date: Mon, 22 Jun 2020 (08:16 IST)
Updated Date: Mon, 22 Jun 2020 (08:18 IST)
ಜೈಪುರ : ಅಂತಾರಾಷ್ಟ್ರೀಯ ಯೋಗದಿನದ ಅಂಗವಾಗಿ ರಾಜಸ್ಥಾನದ ಟೋಂಕ್ ಸವಾಯಿ ಮಾಧೋಪುರದ ಬಿಜೆಪಿ ಸಂಸದ ಸುಖ್ಬೀರ್ ಸಿಂಗ್ ಜೌನಾಪುರಿ ವಿಭಿನ್ನವಾಗಿ ಯೋಗಾಸನ ಮಾಡಿ ಸುದ್ದಿಯಾಗಿದ್ದಾರೆ.
ಬಿಜೆಪಿ ಸಂಸದ ಸುಖ್ಬೀರ್ ಸಿಂಗ್ ಜೌನಾಪುರಿ ಅವರು ಮೈಗೆ ಮಣ್ಣು ಬಳಿದುಕೊಂಡು ಬಿಸಿಲಿನಲ್ಲಿ ಸುತ್ತಲು ಬೆಂಕಿ ಹಾಕಿಕೊಂಡು ಅದರ ಮಧ್ಯದಲ್ಲಿ ನಿಂತ ಭಂಗಿಯಲ್ಲಿ ವಿವಿಧ ಯೋಗಾಸನಗಳನ್ನು ಮಾಡಿದ್ದಾರೆ. ಇವರ ಈ ಅಪಾಯಕಾರಿ ಯೋಗಾಸನದ ಫೋಟೊ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.