Select Your Language

Notifications

webdunia
webdunia
webdunia
webdunia

ಇಸ್ರೇಲ್ ಕ್ಯಾಬಿನೆಟ್ ನಲ್ಲಿ ಹೆಚ್ಚಾಗಿದೆಯಂತೆ ಸಲಿಂಗಿ ಸಂಸದರ ಸಂಖ್ಯೆ

ಇಸ್ರೇಲ್ ಕ್ಯಾಬಿನೆಟ್ ನಲ್ಲಿ ಹೆಚ್ಚಾಗಿದೆಯಂತೆ ಸಲಿಂಗಿ ಸಂಸದರ ಸಂಖ್ಯೆ
ಇಸ್ರೇಲ್ , ಸೋಮವಾರ, 22 ಜೂನ್ 2020 (08:14 IST)
ಇಸ್ರೇಲ್ : ಕ್ಯಾಬಿನೆಟ್ ಸದಸ್ಯರಿಗೆ ತಮ್ಮ ಸ್ಥಾನಗಳನ್ನು ಬಿಟ್ಟುಕೊಡಲು ಅವಕಾಶ ನೀಡುವ ಹೊಸ ನಿಯಮಗಳು ಜಾರಿಯಾದ ಬಳಿಕ ಇಸ್ರೇಲ್ ಕ್ಯಾಬಿನೆಟ್ ನಲ್ಲಿ ಸಲಿಂಗಿ ಸಂಸದರ ಸಂಖ್ಯೆ ಹೆಚ್ಚಾಗಿದೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ.

120 ಸಂಸದರಿರುವ ಇಸ್ರೇಲ್ ಸೆನೆಟ್ ನಲ್ಲಿ 5 ಪಕ್ಷಗಳಿಂದ 6 ಸಲಿಂಗಿ ಸಂಸದರು ಸೇವೆಸಲ್ಲಿಸಿದ್ದರು ಎಂಬುದಾಗಿ ತಿಳಿದುಬಂದಿದೆ. ಯೋರಾಯ್ ಲಹವ್-ಹರ್ಟ್ ಜಾನೊ ಅವರು ಮುಂದಿನ ವಾರ ಪ್ರಮಾಣವಚನ ಸ್ವೀಕರಿಸುತ್ತಿದ್ದು, ಆ ಮೂಲಕ ಅವರು ಆರನೇ ಸಲಿಂಗಿ ಸಂಸದರಾಗಲಿದ್ದಾರೆ.  

ಅಲ್ಲದೇ ಕಳೆದ ವರ್ಷ ತಾನು ಸಲಿಂಗಿ ಎಂದಿ ಘೋಷಿಸಿಕೊಂಡ ಸಂಸದನನ್ನು ಮಂತ್ರಿಯಾಗಿ ನೇಮಕಗೊಳಿಸಲಾಗಿತ್ತು. ಹಾಗೇ ಲಿಕುಡ್ ಪಕ್ಷದ ಅಮೀರ್ ಓಹಾನಾ ಅವರು ನ್ಯಾಯಾಂಗ ಸಚಿವರಾಗಿ ಆಯ್ಕೆಗೊಂಡ  ಇಸ್ರೇಲ್ ಕ್ಯಾಬಿನೆಟ್ ನ ಮೊದಲ ಸಲಿಂಗಿ ಸದಸ್ಯರಾಗಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಶಾಸಕರ ಕುಟುಂಬಕ್ಕೆ ಆತಂಕ : ಗನ್ ಮ್ಯಾನ್ ಗೆ ಕೊರೊನಾ ವೈರಸ್