Select Your Language

Notifications

webdunia
webdunia
webdunia
webdunia

ರಾಷ್ಟ್ರ ರಾಜಧಾನಿಯಲ್ಲಿ ಜ.1ರ ವರೆಗೆ ಪಟಾಕಿ ಮಾರಾಟ, ಉತ್ಪಾದನೆ ನಿಷೇಧ

Firecracks

Sampriya

ನವದೆಹಲಿ , ಸೋಮವಾರ, 9 ಸೆಪ್ಟಂಬರ್ 2024 (16:18 IST)
Photo Courtesy X
ನವದೆಹಲಿ: ಮುಂಬರುವ ಚಳಿಗಾಲದಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸುವ ಸಲುವಾಗಿ ದೆಹಲಿ ಸರ್ಕಾರ ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

 ಪಟಾಕಿ ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯ ಮೇಲಿನ ನಿಷೇಧವು ಜನವರಿ 1, 2025 ರವರೆಗೆ ಜಾರಿಯಲ್ಲಿರುತ್ತದೆ ಎಂದು ಪರಿಸರ ಸಚಿವ ಗೋಪಾರ್ ರೈ ಹೇಳಿದರು.

ಆನ್‌ಲೈನ್‌ನಲ್ಲಿ ಪಟಾಕಿ ಮಾರಾಟ ಮತ್ತು ವಿತರಣೆಯನ್ನು ಸಹ ನಿಷೇಧಿಸಲಾಗಿದೆ. ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ದೆಹಲಿ ಪೊಲೀಸರು, ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ಮತ್ತು ಕಂದಾಯ ಇಲಾಖೆ ಸಹಯೋಗದಲ್ಲಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗುವುದು ಎಂದು ಅವರು ಹೇಳಿದರು.

ಮಾಲಿನ್ಯವನ್ನು ನಿಯಂತ್ರಿಸಲು 21 ಫೋಕಸ್ ಪಾಯಿಂಟ್‌ಗಳನ್ನು ಆಧರಿಸಿ ದೆಹಲಿ ಸರ್ಕಾರದ ಚಳಿಗಾಲದ ಕ್ರಿಯಾ ಯೋಜನೆಯ ಭಾಗವಾಗಿದೆ ಎಂದು ಅವರು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್‌ನಲ್ಲಿ ಹೆಚ್ಚಿದ ಗದ್ದುಗೆ ಗುದ್ದಾಟ: ನಾನೂ ಸಿಎಂ ಆಕಾಂಕ್ಷಿ ಎಂದ ಬಸವರಾಜ ರಾಯರಡ್ಡಿ