ನವದೆಹಲಿ: ಇನ್ಮುಂದೆ ಅವಧಿ ಮೀರಿದ ವಾಹನಗಳನ್ನು ಬೇಕಾಬಿಟ್ಟಿ ಪಾರ್ಕ್ ಮಾಡಿದ್ದಲ್ಲಿ ವಶಕ್ಕೆ ಪಡೆಯುವುದಾಗಿ ದೆಹಲಿ ಸರ್ಕಾರ ಸಾರ್ವಜನಿಕ ತಿಳಿವಳಿ ಸೂಚನೆ ನೀಡಲಾಗಿದೆ.
 
									
			
			 
 			
 
 			
					
			        							
								
																	ಅದರಂತೆ ಅವಧಿ ಮೀರಿದ ವಾಹನಗಳನ್ನು ಖಾಸಗಿ ಸ್ಥಳಗಳಲ್ಲಿ ನಿಲ್ಲಿಸಬೇಕು. ಇಲ್ಲವೇ ಗುಜರಿಗೆ ಹಾಕಬೇಕು ಎಂದು ದೆಹಲಿ ಸರ್ಕಾರವು ಗುರುವಾರ ಹೊರಡಿಸಿರುವ ಸಾರ್ವಜನಿಕ ತಿಳಿವಳಿಯಲ್ಲಿ ಸೂಚಿಸಲಾಗಿದೆ.
									
										
								
																	ಅವಧಿ ಮೀರಿದ ವಾಹನಗಳು ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದು ಕಂಡುಬಂದಿಲ್ಲ, ಅದನ್ನು ಮಾರ್ಗಸೂಚಿ ಉಲ್ಲಂಘನೆ ಎಂದೇ ಪರಿಗಣಿಸಿ ವಶಕ್ಕೆ ಪಡೆಯುವುದಾಗಿ ನೋಟಿಸ್‌ನಲ್ಲಿ ಹೇಳಲಾಗಿದೆ.
									
											
							                     
							
							
			        							
								
																	ಇನ್ನು ಕಳೆದ ಫೆಬ್ರುವರಿಯಲ್ಲಿ ಈ ಕುರಿತು ಹೊರಡಿಸಿದ್ದ ಮಾರ್ಗಸೂಚಿಯನ್ನು ಸರ್ಕಾರ ಮತ್ತೇ ಪುನರ್ ಉಚ್ಚರಿಸಿ ಖಡಕ್ ವಾರ್ನಿಂಗ್ ನೀಡಿದೆ.