Select Your Language

Notifications

webdunia
webdunia
webdunia
webdunia

ಮಾಲಿನ್ಯ ನಿಯಂತ್ರಣಕ್ಕೆ ಪಟಾಕಿ ನಿಷೇಧಿಸಿದ ದೆಹಲಿ ಸರ್ಕಾರ

ಮಾಲಿನ್ಯ ನಿಯಂತ್ರಣಕ್ಕೆ ಪಟಾಕಿ ನಿಷೇಧಿಸಿದ ದೆಹಲಿ ಸರ್ಕಾರ
ನವದೆಹಲಿ , ಮಂಗಳವಾರ, 12 ಸೆಪ್ಟಂಬರ್ 2023 (09:34 IST)
ನವದೆಹಲಿ : ದೀಪಾವಳಿ ಮತ್ತು ದಸರಾ ಸಮೀಸುತ್ತಿರುವ ಹಿನ್ನಲೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಟಾಕಿ ಉತ್ಪಾದನೆ, ಸಂಗ್ರಹ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ. ಚಳಿಗಾಲದಲ್ಲಿ ಮಾಲಿನ್ಯದ ಪ್ರಮಾಣ ತಗ್ಗಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ದೆಹಲಿ ಸರ್ಕಾರದ ಪರಿಸರ ಸಚಿವ ಗೋಪಾಲ್ ರೈ ತಿಳಿಸಿದ್ದಾರೆ.
 
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ದೆಹಲಿ ಸರ್ಕಾರ ಈ ಪದ್ಧತಿ ಜಾರಿ ಮಾಡುತ್ತಾ ಬರುತ್ತಿದೆ. ಈ ವಿಚಾರವಾಗಿ ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲು ದೆಹಲಿ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು. ಈ ನಿರ್ಧಾರದಿಂದ ಕಳೆದ ಕೆಲವು ವರ್ಷಗಳಿಂದ ದೆಹಲಿಯ ಗಾಳಿಯ ಗುಣಮಟ್ಟ ಗಮನಾರ್ಹವಾಗಿ ಸುಧಾರಿಸಿದೆ ಎಂದಿದ್ದಾರೆ. 

ಕಳೆದ ಆರು ವರ್ಷಗಳಲ್ಲಿ ದೆಹಲಿಯ ಗಾಳಿಯ ಗುಣಮಟ್ಟದಲ್ಲಿ ಗಣನೀಯ ಸುಧಾರಣೆಯನ್ನು ಕಂಡಿದ್ದೇವೆ. ಅದು ಇನ್ನಷ್ಟು ಸುಧಾರಿಸಬೇಕಾಗಿದೆ. ಆದ್ದರಿಂದ ನಾವು ಈ ವರ್ಷವೂ ಪಟಾಕಿಗಳನ್ನು ನಿಷೇಧಿಸಲು ನಿರ್ಧರಿಸಿದ್ದೇವೆ. ಇದಕ್ಕೆ ಪೂರಕವಾಗಿ ಅಧಿಕಾರಿಗಳಿಗೆ ಪಟಾಕಿ ಪರವಾನಗಿ ನೀಡುವುದನ್ನು ತಡೆಯುವಂತೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಧಾರ್ಮಿಕ ನಂಬಿಕೆಗಳನ್ನು ಆಚರಿಸಬೇಕು. ನಾವು ದೀಪಗಳೊಂದಿಗೆ ದೀಪಾವಳಿಯನ್ನು ಆಚರಿಸಬೇಕು. ದೀಪಾವಳಿ ಸಮೀಪಿಸುತ್ತಿದ್ದಂತೆ ಚಳಿಗಾಲದ ಕ್ರಿಯಾ ಯೋಜನೆಯನ್ನು ಜಾರಿಗೆ ತರುವ ಯೋಜನೆಯೊಂದಿಗೆ ಅಧಿಕಾರಿಗಳು ಮಾಲಿನ್ಯದ ಹಾಟ್ಸ್ಪಾಟ್ಗಳ ಮೇಲ್ವಿಚಾರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಫುಡ್ ಡೆಲಿವರಿ ಬಾಯ್ಸ್‍ಗೆ ಗುಡ್ ನ್ಯೂಸ್ : 4 ಲಕ್ಷ ವಿಮೆ ಘೋಷಣೆ