ಬೆಂಗಳೂರು : ಸ್ವಿಗ್ಗೀ, ಝೋಮ್ಯಾಟೋ ಸೇರಿದಂತೆ ಎಲ್ಲಾ ಗಿಗ್ ಕಾರ್ಮಿಕರಿಗೆ 4 ಲಕ್ಷ ರೂ. ವಿಮೆ ಘೋಷಣೆ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
2 ಲಕ್ಷ ರೂ. ಅಪಘಾತ ವಿಮೆ, 2 ಲಕ್ಷ ರೂ. ಜೀವವಿಮೆ ಸೇರಿದಂತೆ 4 ಲಕ್ಷ ರೂ. ವಿಮೆ ಘೋಷಣೆ ಮಾಡಿ ಕರ್ನಾಟಕ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಯೋಜನೆಗೆ ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆಯನ್ನು ರೂಪಿಸಲಾಗಿದೆ.
Swiggy, Zomato ಮತ್ತು Amazon ನಂತಹ ಎಲ್ಲಾ ಇ-ಕಾಮರ್ಸ್ ಡೆಲಿವರಿ ಉದ್ಯೋಗಿಗಳಿಗೆ 4 ಲಕ್ಷಗಳ ಜೀವ ಮತ್ತು ಅಪಘಾತ ವಿಮೆಯನ್ನು ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದರು.
ಗಿಗ್ ಕಾರ್ಮಿಕರು ರಾಜ್ಯ ಸರ್ಕಾರದ ಸೇವಾ ಸಿಂಧು ಪೋರ್ಟಲ್ನಲ್ಲಿ ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಅರ್ಜಿ ಸಲ್ಲಿಸಿ ಗುರುತಿನ ಚೀಟಿ ಪಡೆಯಬೇಕಾಗುತ್ತದೆ. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 18 ರಿಂದ 60 ವರ್ಷದ ಎಲ್ಲ ಪ್ಲಾಟ್ಫಾರಂ ಆಧಾರಿತ ಗಿಗ್ ಕಾರ್ಮಿಕರು ಯೋಜನೆಗೆ ಒಳಪಡುತ್ತಾರೆ. ಆದಾಯ ತೆರಿಗೆ ಪಾವತಿದಾರರಾಗಿಬಾರದು.