Select Your Language

Notifications

webdunia
webdunia
webdunia
webdunia

‘ಕೈ’ ಸರ್ಕಾರದ ಅವಧಿಯಲ್ಲಿ ಆತ್ಮಹತ್ಯೆ ಹೆಚ್ಚಳ

‘ಕೈ’ ಸರ್ಕಾರದ ಅವಧಿಯಲ್ಲಿ ಆತ್ಮಹತ್ಯೆ ಹೆಚ್ಚಳ
bangalore , ಸೋಮವಾರ, 11 ಸೆಪ್ಟಂಬರ್ 2023 (19:22 IST)
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಟ್ವೀಟ್​ ಮಾಡಿ ಆಕ್ರೋಶ ಹೊರಹಾಕಿದೆ.. ನಿನ್ನೆಯಷ್ಟೆ ವಿಶ್ವ ಆತ್ಮಹತ್ಯೆ ತಡೆ ದಿನ ಮುಗಿದಿದೆ. ಆದರೆ ದುರದೃಷ್ಟವಶಾತ್ ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ಮಾತ್ರ ನಿಲ್ಲುತ್ತಿಲ್ಲ. ಕಲಬುರಗಿಯ ರೈತ ಬರದಿಂದ ಬೆಳೆ ಕೈ ಕೊಟ್ಟ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದ್ರು.. ಸಿಎಂ ಸಿದ್ದರಾಮಯ್ಯರವರ ಮೊದಲ ಸರ್ಕಾರದ ಅವಧಿಯಲ್ಲಿ, ಸರ್ಕಾರದ ರೈತ ವಿರೋಧಿ ನೀತಿಯಿಂದ 4,257 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.. ಈ ಸರ್ಕಾರದ ಮೂರು ತಿಂಗಳ ಅವಧಿಯಲ್ಲಿ ಈಗಾಗಲೇ 100 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಂಕಿ ಸಂಖ್ಯೆ ಒದಗಿಸಿದೆ. ಆದರೆ ಬೇಜವಾಬ್ದಾರಿ ಕಾಂಗ್ರೆಸ್​​ ಸರ್ಕಾರ ಮಾತ್ರ ರೈತರ ಸಂಕಷ್ಟಗಳಿಗೆ ಸ್ಪಂದಿಸದೇ, ರೈತರ ಆತ್ಮಹತ್ಯೆಗಳನ್ನು ಅವಹೇಳನ, ವ್ಯಂಗ್ಯ ಮಾಡಿಕೊಂಡು ಅಪಮಾನ ಮಾಡುತ್ತಿದೆ ಎಂದು ಕಿಡಿಕಾರಿದೆ.

Share this Story:

Follow Webdunia kannada

ಮುಂದಿನ ಸುದ್ದಿ

G.M.ಸಿದ್ದೇಶ್ವರರಿಗೆ ರೇಣುಕಾಚಾರ್ಯ ಚೆಕ್​ಮೇಟ್​​​?