Publish Date: Thu, 20 Jun 2024 (15:59 IST)
Updated Date: Thu, 20 Jun 2024 (16:01 IST)
ಬೆಂಗಳೂರು: ದರ್ಶನ್ ಆಂಡ್ ಗ್ಯಾಂಗ್ ರೇಣುಕಾಸ್ವಾಮಿ ಮೇಲೆ ನಡೆಸಿದ ಹಲ್ಲೆ ಮತ್ತು ಹತ್ಯೆ ಪ್ರಕರಣದ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಖಡಕ್ ಆಗಿರುವುದಕ್ಕೆ ಕಾರಣವೇನೆಂದು ಈಗ ಬಯಲಾಗಿದೆ. ಈ ಹಲ್ಲೆಯ ವಿಡಿಯೋ ನೋಡಿ ಸ್ವತಃ ಸಿಎಂ ಶಾಕ್ ಗೊಳಗಾಗಿದ್ದಾರಂತೆ.
ದರ್ಶನ್ ಆಂಡ್ ಗ್ಯಾಂಗ್ ನಡೆಸಿದ ಅನಾಚಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ ಮೀಟಿಂಗ್ ನಲ್ಲೂ ಪ್ರಸ್ತಾಪಿಸಿದ್ದಾರಂತೆ. ಅಲ್ಲದೆ, ತಮ್ಮ ಸಂಪುಟದ ಸಚಿವರಿಗೆ ಯಾವುದೇ ಕಾರಣಕ್ಕೂ ಈ ವಿಚಾರದಲ್ಲೂ ಯಾರೂ ದರ್ಶನ್ ಪರ ವಹಿಸಿಕೊಂಡು ಬರಬೇಡಿ ಎಂದು ಖಡಕ್ ಆಗಿ ಸೂಚನೆ ನೀಡಿದ್ದಾರಂತೆ.
ರೇಣುಕಾಸ್ವಾಮಿ ಮೇಲೆ ನಡೆಸಿದ ಹಲ್ಲೆ ವಿಡಿಯೋವನ್ನು ಪೊಲೀಸರು ತೋರಿಸಿದ್ದಾರೆ. ಇಂತಹ ಕ್ರೂರತನವನ್ನು ಎಲ್ಲೂ ನೋಡೇ ಇಲ್ಲ ಎಂದು ಆಘಾತ ವ್ಯಕ್ತಪಡಿಸಿದ್ದಾರಂತೆ. ಹೀಗಾಗಿ ಈ ಪ್ರಕರಣದಲ್ಲಿ ಯಾರೂ ದರ್ಶನ್ ಪರ ವಹಿಸಿಕೊಂಡು ನನ್ನ ಬಳಿ ಬರುವುದು ಬೇಡ. ಕಾನೂನು ಪ್ರಕಾರ ಏನು ಮಾಡಬೇಕೋ ಮಾಡಲಿ ಎಂದಿದ್ದಾರಂತೆ.
ಅಷ್ಟೇ ಅಲ್ಲ, ದರ್ಶನ್ ಪರವಾಗಿ ಅಥವಾ ಪ್ರಕರಣದ ಬಗ್ಗೆ ಬಹಿರಂಗವಾಗಿ ಯಾರೂ ಹೆಚ್ಚು ಮಾತನಾಡುವುದು ಬೇಡ ಎಂದೂ ಇತರೆ ಸಚಿವರಿಗೆ ಸಿಎಂ ಖಡಕ್ ಸೂಚನೆ ಕೊಟ್ಟಿದ್ದಾರಂತೆ. ಪೊಲೀಸರು ತೋರಿಸಿದ ವಿಡಿಯೋ ನೋಡಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ಮೃದು ಧೋರಣೆ ಇಲ್ಲ ಎಂದು ನಿರ್ಧಾರ ಮಾಡಿದ್ದಾರೆ.