Select Your Language

Notifications

webdunia
webdunia
webdunia
webdunia

ದರ್ಶನ್ ಆಂಡ್ ಗ್ಯಾಂಗ್ ಬಂದ ಕೋರ್ಟ್ ಸುತ್ತಮುತ್ತ ಜನವೋ ಜನ

Darshan

Krishnaveni K

ಬೆಂಗಳೂರು , ಗುರುವಾರ, 20 ಜೂನ್ 2024 (15:49 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಗ್ಯಾಂಗ್ ಇದೀಗಷ್ಟೇ ಕೋರ್ಟ್ ಗೆ ಹಾಜರಾಗಿದ್ದಾರೆ. ಪೊಲೀಸ್ ಕಸ್ಟಡಿ ಮುಗಿದ ಹಿನ್ನಲೆಯಲ್ಲಿ ಇಂದು ದರ್ಶನ್ ಮತ್ತು ಇತರೆ ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಲಾಗಿದೆ.

ಪೊಲೀಸ್ ವಾಹನದಲ್ಲಿ ದರ್ಶನ್ ಮತ್ತು ಇತರರು ಬಂದಿಳಿಯುತ್ತಿದ್ದಂತೇ ಆರೋಪಿಗಳನ್ನು ನೋಡುವುದಕ್ಕೆಂದೇ ಅಲ್ಲಿ ಕುತೂಹಲದಿಂದ ಜನ ಕಾಯುತ್ತಿದ್ದರು. ದರ್ಶನ್ ಅಭಿಮಾನಿಗಳು ಬರಬಹುದು ಎಂದು ಮೊದಲೇ ಊಹಿಸಿದ್ದ ಪೊಲೀಸರು ಕೋರ್ಟ್ ಸುತ್ತ ಬಿಗಿ ಭದ್ರತೆ ಒದಗಿಸಿದ್ದಾರೆ.

ಮೊನ್ನೆಯೂ ದರ್ಶನ್ ಕೋರ್ಟ್ ಗೆ ಬಂದಾಗ ಸಾಕಷ್ಟು ಜನ ಅಭಿಮಾನಿಗಳೂ ಜಮಾಯಿಸಿದ್ದರು. ಇಂದೂ ಕೂಡಾ ಅದೇ ಸನ್ನಿವೇಶವಿದೆ. ಇದೀಗ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಇದುವರೆಗೆ ಪೊಲೀಸರು ಸಂಗ್ರಹಿಸಿರುವ ಎಲ್ಲಾ ಸಾಕ್ಷ್ಯಾಧಾರಗಳನ್ನು ಇಂದು ಕೋರ್ಟ್ ಗೆ ಒದಗಿಸಲಿದ್ದಾರೆ.

ಇವುಗಳನ್ನು ಪರಿಶೀಲಿಸಿ ಕೋರ್ಟ್ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ. ಹೆಚ್ಚಿನ ವಿಚಾರಣೆ ಅಗತ್ಯವಿದ್ದರೆ ಮಾತ್ರ ಮತ್ತೆ ಪೊಲೀಸ್ ಕಸ್ಟಡಿಗೆ ನೀಡಬಹುದು. ಇಲ್ಲದೇ ಹೋದರೆ ದರ್ಶನ್ ಆಂಡ್ ಗ್ಯಾಂಗ್ ನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲು ಕೋರ್ಟ್ ಆದೇಶ ನೀಡಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ತಾಯಿಯಾಗುತ್ತಿರುವ ದೀಪಿಕಾಳನ್ನು ರಣವೀರ್ ಕೇರ್ ಮಾಡುವ ರೀತಿಗೆ ಫ್ಯಾನ್ಸ್ ಫಿದಾ