Publish Date: Thu, 20 Jun 2024 (13:34 IST)
Updated Date: Thu, 20 Jun 2024 (13:37 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ಆದ ಮೇಲೆ ಮದರ್ ಇಂಡಿಯಾ ಸುಮಲತಾ, ಬ್ರದರ್ ಇಂಡಿಯಾ ಅಭಿಷೇಕ್ ಅಂಬರೀಶ್ ಇಬ್ಬರೂ ಸೈಲಂಟ್ ಮೋಡ್ ನಲ್ಲಿದ್ದಾರೆ.
ಸುಮಲತಾ ಅಂಬರೀಶ್ ಸದಾ ದರ್ಶನ್ ರನ್ನು ನನ್ನ ಮಗ ಎನ್ನುತ್ತಿದ್ದರು. ಅಭಿಷೇಕ್ ಅಂಬರೀಶ್ ನನ್ನ ಅಣ್ಣ ಎನ್ನುತ್ತಿದ್ದರು. ಆದರೆ ಹತ್ಯೆ ಕೇಸ್ ನಲ್ಲಿ ದರ್ಶನ್ ಅರೆಸ್ಟ್ ಆದ ಬಳಿಕ ಈ ಇಬ್ಬರೂ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಸೋಷಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಮಾತನಾಡಿಲ್ಲ.
ಸುಮಲತಾ ಈ ನಡುವೆ ಸುಲಭವಾಗಿ ಇಸ್ತ್ರಿ ಮಾಡುವ ವಿಧಾನದ ವಿಡಿಯೋವೊಂದನ್ನು ಹಂಚಿಕೊಂಡು ಟ್ರೋಲ್ ಗೊಳಗಾಗಿದ್ದರು. ಮಗ ಅರೆಸ್ಟ್ ಆಗಿದ್ದರೆ ನೀವಿಲ್ಲಿ ಇಸ್ತ್ರಿ ಮಾಡುವುದು ಹೇಗೆ ಎಂದು ವಿಡಿಯೋ ಹಾಕ್ತಿದ್ದೀರಾ ಎಂದು ಟ್ರೋಲ್ ಮಾಡಿದ್ದರು. ಅದರ ಹೊರತಾಗಿ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರಿಂದಲೂ ಯಾವುದೇ ಪೋಸ್ಟ್ ಇಲ್ಲ.
ಸುಮಲತಾ ಚುನಾವಣೆ ಗೆಲ್ಲಲು ದರ್ಶನ್ ಹಗಲಿರುಳೆನ್ನದೇ ಪ್ರಚಾರ ಮಾಡಿದ್ದರು. ಇತ್ತೀಚೆಗೆ ಸುಮಲತಾ ಬಿಜೆಪಿ ಸೇರ್ಪಡೆ ಬಗ್ಗೆ ಮಂಡ್ಯದಲ್ಲಿ ಸಮಾವೇಶ ನಡೆಸಿದಾಗಲೂ ಕೈ ಶಸ್ತ್ರಚಿಕಿತ್ಸೆಯನ್ನೂ ಮುಂದೂಡಿ ಬೆಲ್ಟ್ ಹಾಕಿಕೊಂಡೇ ದರ್ಶನ್ ಸುಮಲತಾ ಜೊತೆ ಬಂದು ನಿಂತಿದ್ದರು. ಅಮ್ಮನಿಗಾಗಿ ಏನು ಬೇಕಾದರೂ ಮಾಡ್ತೀನಿ ಎಂದಿದ್ದರು. ಆದರೆ ಈಗ ದರ್ಶನ್ ಸಂಕಷ್ಟದಲ್ಲಿದ್ದು, ಈ ಇಬ್ಬರೂ ತುಟಿಪಿಟಕ್ ಎನ್ನದೇ ಇರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.