Select Your Language

Notifications

webdunia
webdunia
webdunia
webdunia

ಇಂದು ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ರೇಣುಕಾಸ್ವಾಮಿ ಹತ್ಯೆ ಆರೋಪಿಗಳ ಭವಿಷ್ಯ ನಿರ್ಧಾರ

Darshan

Krishnaveni K

ಬೆಂಗಳೂರು , ಗುರುವಾರ, 20 ಜೂನ್ 2024 (10:12 IST)
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರಾ ಗೌಡ ಮತ್ತು ಇತರೆ ಆರೋಪಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

ದರ್ಶನ್ ಹಾಗೂ ಇತರೆ ಆರೋಪಿಗಳ ಪೊಲೀಸ್ ಕಸ್ಟಡಿ ಇಂದಿಗೆ ಅಂತಿಮವಾಗುತ್ತಿದೆ. ಇಂದು ಮತ್ತೆ ಎಲ್ಲಾ ಆರೋಪಿಗಳನ್ನು ಪೊಲೀಸರು ಇಂದು ಮಧ್ಯಾಹ್ನ ಬೆಂಗಳೂರಿನ 24 ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ನ್ಯಾಯಾಂಗ ಬಂಧನ ವಿಧಿಸುತ್ತಾರೋ ಅಥವಾ ಮತ್ತೆ ಪೊಲೀಸ್ ಕಸ್ಟಡಿಗೆ ನೀಡುತ್ತಾರೋ ಎಂದು ತೀರ್ಮಾನವಾಗಲಿದೆ.

ಶನಿವಾರದಂದು ದರ್ಶನ್ ಮತ್ತು ಇತರರನ್ನು ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದರು. ಈ ವೇಳೆ ಮತ್ತಷ್ಟು ವಿಚಾರಣೆ ಅಗತ್ಯವಿರುವುದರಿಂದ ಮತ್ತೆ ನಾಲ್ಕು ದಿನಗಳ ಕಾಲ ಪೊಲೀಸ್ ವಶಕ್ಕೊಪ್ಪಿಸಲಾಗಿತ್ತು. ಇದೀಗ ಪೊಲೀಸರು ಸ್ಥಳ ಮಹಜರು, ಡಿಎನ್ ಎ ಟೆಸ್ಟ್ ಸೇರಿದಂತೆ ಎಲ್ಲಾ ರೀತಿಯ ವಿಚಾರಣೆಗಳನ್ನು ಮುಗಿಸಿದ್ದಾರೆ.

ಹೀಗಾಗಿ ಇಂದು ದರ್ಶನ್ ಮತ್ತು ಇತರೆ ಆರೋಪಿಗಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸುವ ಸಾಧ್ಯತೆಯಿದೆ. ಜೂನ್ 11 ರಂದು ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಮತ್ತು ಇತರರನ್ನು ಪೊಲೀಸರು ಬಂಧಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಬಗ್ಗೆ ಇನ್ಮೇಲೆ ಬೇಕಾಬಿಟ್ಟಿ ಬರೆಯೋ ಹಾಗಿಲ್ಲ: ಆರ್ಡರ್ ತಂದ ವಿಜಯಲಕ್ಷ್ಮಿ