ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಗೆಳತಿ ಪವಿತ್ರಾ ಗೌಡ ಮನೆ ಮಹಜರು ವೇಳೆ 15 ಕೋಟಿ ರೂ. ಮೌಲ್ಯದ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಪವಿತ್ರಾ ಮನೆಯಲ್ಲಿ ಮೊನ್ನೆ ಪೊಲೀಸರು ಸ್ಥಳ ಮಹಜರು ಮಾಡಿದ್ದರು. ಆಕೆ ಮತ್ತು ಆಕೆಯ ಆಪ್ತ ಮತ್ತೊಬ್ಬ ಆರೋಪಿ ಪವನ್ ನನ್ನು ಕರೆತಂದು ಮನೆಯಲ್ಲಿ ಮಹಜರು ಮಾಡಲಾಗಿತ್ತು. ಈ ವೇಳೆ ಪವಿತ್ರಾ ಘಟನೆ ನಡೆದ ದಿನ ಧರಿಸಿದ್ದ ಬಟ್ಟೆ, ಚಪ್ಪಲಿ ಮುಂತಾದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಅಷ್ಟೇ ಅಲ್ಲದೆ ಪೊಲೀಸರು 15 ಕೋಟಿ ರೂ. ಮೌಲ್ಯದ ದಾಖಲೆ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಕಳೆದ 10 ವರ್ಷಗಳಿಂದ ಪವಿತ್ರಾ ಆರ್ ಆರ್ ನಗರದ ಈ ಮೂರು ಮಹಡಿಯ ಐಷಾರಾಮಿ ಬಂಗಲೆಯಲ್ಲಿ ವಾಸ ಮಾಡುತ್ತಿದ್ದಾರೆ. ಈಗ ವಶಪಡಿಸಿಕೊಳ್ಳಲಾಗಿರುವ ಕೋಟ್ಯಾಂತರ ರೂಪಾಯಿ ಮೌಲ್ಯದ ದಾಖಲೆ ಪತ್ರಗಳ ವಿವರ ಬಹಿರಂಗವಾಗಿಲ್ಲ. ನಟಿಸಿದ್ದು ಬೆರಳಣಿಕೆಯ ಸಿನಿಮಾದಲ್ಲಿ. ಈಗ ಬ್ಯುಟೀಕ್, ಫ್ಯಾಶನ್ ಡಿಸೈನಿಂಗ್ ಲೋಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಷ್ಟಕ್ಕೇ ಇಷ್ಟೊಂದು ಆಸ್ತಿ ಮಾಡಿಟ್ಟುಕೊಂಡಿದ್ದಾರಾ ಎಂದು ಅನುಮಾನದಿಂದ ನೋಡುವಂತಾಗಿದೆ.