Select Your Language

Notifications

webdunia
webdunia
webdunia
webdunia

ದರ್ಶನ್ ಬಗ್ಗೆ ಇನ್ಮೇಲೆ ಬೇಕಾಬಿಟ್ಟಿ ಬರೆಯೋ ಹಾಗಿಲ್ಲ: ಆರ್ಡರ್ ತಂದ ವಿಜಯಲಕ್ಷ್ಮಿ

viji darshan

Sampriya

ಬೆಂಗಳೂರು , ಬುಧವಾರ, 19 ಜೂನ್ 2024 (19:44 IST)
photo Courtesy Instagram
ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮೀ ಇಂದು ಭೇಟಿಯಾದ ಬೆನ್ನಲ್ಲೇ ಪ್ರಕರಣ ಸಂಬಂಧ ಫಸ್ಟ್ ರಿಯಾಕ್ಷನ್ ನೀಡಿದ್ದಾರೆ.

ಇನ್ನೂ ರೇಣುಕಸ್ವಾಮಿ ಅವರು ಕೊಲೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ದರ್ಶನ್ ಅವರು ಕಳೆದ 9 ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇದುವರೆಗೂ ವಿಜಯಲಕ್ಷ್ಮೀ ಅವರು ಈ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರಲಿಲ್ಲ. ಅದಲ್ಲದೆ ಇನ್‌ಸ್ಟಾಗ್ರಾಂನಿಂದ ಡಿಪಿ ರಿಮೂವ್ ಮಾಡುವ ಮೂಲಕ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಪ್ರಕರಣ ನಡೆದು 9 ದಿನಗಳ ಕಾಲ ಮೌನ ವಹಿಸಿದ್ದ ವಿಜಯಲಕ್ಷ್ಮೀ ಅವರು ಮೊದಲ ಬಾರಿ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರೇಣುಕಾಸ್ವಾಮಿ ನಿಧನಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಇನ್‌ಸ್ಟಾಗ್ರಾಂನಲ್ಲಿ ಫೋಸ್ಟ್ ಹಾಕಿ ಸಂತಾಪ ಸೂಚಿಸಿದ್ದಾರೆ.

ಮೃತ ರೇಣುಕಾಸ್ವಾಮಿಗೆ ಸಂತಾಪವನ್ನು ಸೂಚಿಸುತ್ತೇನೆ. ನನ್ನ ಹದಿಹರೆಯದ ಮಗ ಹಾಗೂ ಕುಟುಂಬಕ್ಕೆ ದುಃಖ ತಂದಿದೆ.

ನನ್ನ ಹಾಗೂ ನನ್ನ ಮಗನ ವಿರುದ್ಧ ಸುಳ್ಳು ಮಾಹಿತಿ ಹಾಗೂ ಅಸತ್ಯಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕುವುದನ್ನು ತಡೆಯಬೇಕಾಗಿದೆ. ಅಲ್ಲದೆ ನನ್ನ ಪತಿ ದರ್ಶನ್ ವಿರುದ್ಧವೂ ಸುಳ್ಳು ಸುದ್ದಿಗಳನ್ನು ಪ್ರಕಟಿಸಿದಂತೆ ಕೋರ್ಟ್‌ನಿಂದ ತಡೆ ತಂದಿದ್ದಾರೆ. ಈ ಪ್ರಕರಣ ಸಂಬಂಧ ಅಧಿಕೃತ ಪ್ರಕಟಣೆಯನ್ನು ಮಾತ್ರ ಪ್ರಕಟಿಸುವಂತೆ ನಾನು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ. ತಾಯಿ ಚಾಮುಂಡೇಶ್ವರಿ ಹಾಗೂ ಕಾನೂನು ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ನ್ಯಾಯವು ಮೇಲುಗೈ ಸಾಧಿಸಲಿ. 'ಸತ್ಯಮೇವ ಜಯತೆ' ಎಂದು ದರ್ಶನ್ ಪತ್ನಿ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿನ್ನರ್ ಆಗಿ ಕೈ ಹಿಡಿದು ಎತ್ತಿದ್ದ ‘ಕಿಚ್ಚ‘ ಇಂದು ಬೆನ್ನೆಲುಬಾಗಿದ್ದಾರೆ: ಕಾರ್ತಿಕ್ ಮಹೇಶ್