Publish Date: Tue, 18 Jun 2024 (19:59 IST)
Updated Date: Tue, 18 Jun 2024 (20:03 IST)
ಬೆಳಗಾವಿ: ನಟ ದರ್ಶನ್ ಅವರದ್ದು ಸಹಜವಾಗಿ ಒರಟು ಸ್ವಭಾವವಾಗಿದ್ದು, ನಮ್ಮ ಜತೆ ಯಾವತ್ತೂ ಆ ರೀತಿ ವರ್ತಿಸುತ್ತಿರಲಿಲ್ಲ ಎಂದು ಧಾರವಾಡ ಶಾಸಕ ವಿನಯ್ ಕುಲಕರ್ಣಿ ಅವರು ಹೇಳಿದರು.
ಅವರು ಇಂದು ರೇಣುಕಸ್ವಾಮಿ ಕೊಲೆ ಪ್ರಕರಣ ಸಂಬಂದ ಬೆಳಗಾವಿ ಪ್ರವಾಸಿ ಮಂದಿರಲ್ಲಿ ಮಾತನಾಡಿ, ದರ್ಶನ್ ಅವರ ಮೇಲೆ ಆರೋಪ ಇದ್ದಿದ್ದಕ್ಕೆ ಪೊಲೀಸರು ಬಂಧಿಸಿ, ಕ್ರಮ ತೆಗೆದುಕೊಂಡಿದ್ದಾರೆ. ತಪ್ಪು ಯಾರು ಮಾಡಿದ್ದರು ತಪ್ಪೇ, ಇದರಲ್ಲಿ ರೇಣುಕಸ್ವಾಮಿಗೆ ನ್ಯಾಯ ಸಿಗಬೇಕು. ಈ ಪ್ರಕರಣದಲ್ಲಿ ದರ್ಶನ್‌ಗೆ ಏನು ಶಿಕ್ಷೆಯಾಗಬೇಕೆಂದು ಕೋರ್ಟ್ ತೀರ್ಮಾನ ಮಾಡುತ್ತದೆ ಎಂದರು.
ಇನ್ನೂ ದರ್ಶನ್ ಪ್ರಕರಣದಲ್ಲಿ ಪ್ರಭಾವಿಗಳು ಒತ್ತಡ ಹಾಕುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಂತಹ ಪ್ರಕರಣದಲ್ಲಿ ಯಾರಿಗೂ ಒತ್ತಡ ಹಾಕಲು ಸಾಧ್ಯವಿಲ್ಲ. ಈ ಪ್ರಕರಣದ ತನಿಖೆ ಮುಗಿಯುತ್ತಾ ಬಂದಿದೆ. ಅದಲ್ಲದೆ ೀ ಪ್ರಕರಣದ ಬಗ್ಗೆ ರಾಜ್ಯಕ್ಕೆ ಗೊತ್ತಿದೆ. ಆದ್ದರಿಂದ ರಾಜಕಾರಣಿಗಳು ಯಾವುದೇ ರೀತಿಯ ಒತ್ತಡ ಹಾಕಲು ಸಾಧ್ಯವಿಲ್ಲ ಎಂದರು.